ತುಮಕೂರು/ಕೊರಟಗೆರೆ : ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಇಂದು ಕೊರಟಗೆರೆ ನಾಮಪತ್ರ ಸಲ್ಲಿಸಲು ತಾಲ್ಲೂಕು ಕಚೇರಿ ಒಳಭಾಗ ಹೋಗುತ್ತಿದ್ದ ವೇಳೆ ನೆರೆದಿದ್ದ ಜನರ ಗುಂಪಿನಿಂದ ಕಲ್ಲು ತೂರಿ ಬಂದ ಹಿನ್ನೆಲೆ ಗೇಟ್ ಒಳನಿಂತಿದ್ದ ಮಹಿಳಾ ಪೇದೆಗೆ ಕಲ್ಲು ಬಿದ್ದಿದೆ.
ಇದರಿಂದಾಗಿ ತೀವ್ರ ಗಾಯಗೊಂಡ ಮಹಿಳಾಪೇದೆ ಸ್ಥಳದಲ್ಲಿಯೇ ಕುಸಿದು ಬಿದ್ದಿದ್ದಾರೆ. ಕೂಡಲೇ ಆಕೆಯನ್ನ ಆರೈಕೆ ಮಾಡಿ ಪೊಲೀಸ್ ಜೀಪಿನಲ್ಲಿ ತಾಲೂಕು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು.
ಕೊರಟಗೆರೆ ವಿಧಾನಸಭಾ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸಲು ಇಂದು ಕೋರಟಗೆರೆ ಪಟ್ಟಣದಾದ್ಯಂತ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳೊಂದಿಗೆ ಪರಮೇಶ್ವರ್. ತಾಲೂಕು ಕಚೇರಿಯತ್ತ ಹೆಜ್ಜೆ ಹಾಕುತ್ತಿದ್ದರು ಈ ಸಂದರ್ಭದಲ್ಲಿ ಗೇಟ್ ಒಳಭಾಗಕ್ಕೆ ಪರಮೇಶ್ವರ್ ತೆರಳಿದ ಬಳಿಕ ಕಲ್ಲೆಸೆತ ನಡೆದಿದೆ ಸಾವಿರಾರು ಸಂಖ್ಯೆಯಲ್ಲಿದ್ದ ಜನರು ಯಾರು ಕಲ್ಲು ಎಸೆದಿದ್ದಾರೆ ಎಂಬುದು ಮಾತ್ರ ತಿಳಿಯದಾಗಿದೆ.
ಅದೃಷ್ಟವಶಾತ್ ಪರಮೇಶ್ವರ ಅವರು ಹಾಗೂ ಅವರ ಜೊತೆಯಲ್ಲಿದ್ದ ಸಿ ನಾಮಪತ್ರ ಸಲ್ಲಿಸಲು ಹೋಗುತ್ತಿದ್ದವರಿಗೆ ಕಲ್ಲೇಟು ಬಿದ್ದಿಲ್ಲ. ಇನ್ನು ಈ ಘಟನೆಯಿಂದ ಸ್ಥಳದಲ್ಲಿ ಭದ್ರತಾ ವೈಫಲ್ಯ ಎದ್ದು ಕಾಣುತ್ತಿದೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.
ಅಲ್ಲದೆ ಕಲ್ಲುತೂರಾಟ ನಡೆದ ಸಂದರ್ಭದಲ್ಲಿ ಕೆಲ ಅಭಿಮಾನಿಗಳು ಇದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು ಆದರೆ ಯಾರು ಕಲ್ಲು ಎಸೆದರು ಎಂಬುದು ಮಾತ್ರ ಪೊಲೀಸರಿಗೆ ಸ್ಪಷ್ಟವಾಗಿ ತಿಳಿಯದಾಗಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy