ತುಮಕೂರಿನ ವಿಪ್ರೋ ಎಂಟರ್ ಪ್ರೈಸಸ್ ಪ್ರೈ.ಲಿ. ಮತ್ತು ಗುಬ್ಬಿಯ ಮಡಿಲು ಸೇವಾ ಟ್ರಸ್ಟ್ (ರಿ) ಇದರ ಸಹಯೋಗದೊಂದಿಗೆ ಉಚಿತ ಕಣ್ಣು ತಪಾಸಣಾ ಶಿಬಿರವು ಏಪ್ರಿಲ್ 25ರಂದು ತುಮಕೂರು ತಾಲೂಕಿನ ಗೂಳೂರು ಪಂಚಾಯತ್ ಆವರಣದಲ್ಲಿ ನಡೆಯಲಿದೆ.
ಬೆಳಗ್ಗೆ 10:30ರಿಂದ ಆರಂಭವಾಗಲಿರುವ ಶಿಬಿರವು ಮಧ್ಯಾಹ್ನ 2:30ರವರೆಗೆ ನಡೆಯಲಿದೆ. ಕಾರ್ಯಕ್ರಮವನ್ನು ವಿಪ್ರೋ ಎಂಟರ್ ಪ್ರೈಸಸ್ ಪ್ರೈ.ಲಿ ವೈಸ್ ಪ್ರೆಸಿಡೆಂಟ್ ವಿಶ್ವನಾಥ್ ಕಾರ್ಕಡ ಉದ್ಘಾಟಿಸಲಿದ್ದಾರೆ.
ಮಡಿಲು ಸೇವಾ ಟ್ರಸ್ಟ್ ನ ಮುಖ್ಯಸ್ಥರಾದ ಸಿ.ಕೆ.ಮುರಳೀಧರನ್ ಹಾಗೂ ಮಡಿಲು ಸೇವಾ ಟ್ರಸ್ಟ್ ನ ಟ್ರಸ್ಟಿ ಅಬ್ರಹಾಂ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಗೂಳೂರು ಪಂಚಾಯತ್ ನ ಪಿಡಿಓ ಡಿ.ಶಂಶೀರ್ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy