ತುಮಕೂರು: ಭೂಮಿಯ ಅಳತೆಗೆ ತೆರಳಿದ್ದ ಸರ್ವೇಯರ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಕುಣಿಗಲ್ ತಾಲ್ಲೂಕಿನ ಬಿದನಗೆರೆ ಗ್ರಾಮದಲ್ಲಿ ಗುರುವಾರ ನಡೆಸಿದ್ದು, ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗಿರೀಶ್ ಎಂಬವರು ಹಲ್ಲೆಗೆ ಒಳಗಾದ ಲೈಸೆನ್ಸ್ ಸರ್ವೆಯರ್ ಆಗಿದ್ದು, ಬಿದನಗೆರೆ ನಿವಾಸಿ ರತ್ನಮ್ಮ ಎಂಬುವವರು. ತಮ್ಮ ಜಮೀನು ಬಿದನಗೆರೆ ಸರ್ವೆ ನಂಬರ್ 94 ಮತ್ತು 74 ರ ಜಮೀನಿಗೆ ಸಂಬಂಧಿಸಿದಂತೆ. ಭೂಮಿ ಅಳತೆಗೆ ಸರ್ವೆಗೆ ಅರ್ಜಿ ಕೊಟ್ಟು ಭೂಮಿ ಸರ್ವೆ ಮಾಡಿಸಲು ಮುಂದಾಗಿದ್ರು. ಈ ವೇಳೆ ಪಕ್ಕದ ಜಮೀನಿನ ಕೃಷ್ಣಪ್ಪ ಹಾಗೂ ಆತನ ಪುತ್ರ. ನಮಗೆ ನೋಟಿಸ್ ಕೊಡದೇ ಭೂಮಿ ಸರ್ವೆಗೆ ಬಂದಿದ್ದೀರಾ ಎಂದು ಗಲಾಟೆ ಮಾಡಿದ್ದಾರೆ.
ಭೂಮಿ ಸರ್ವೆ ಮಾಡುತ್ತಿದ್ದ ಸರ್ವೆಯರ್ ಮೇಲೆ ಕಲ್ಲು ಹಾಗೂ ಇಟ್ಟಿಗೆಯಿಂದ. ಹಿಗ್ಗಾಮುಗ್ಗ ಥಳಿಸಿ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ. ನಾಲ್ಕೈದು ಜನರು ಸೇರಿ ಗಿರೀಶ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದು, ಹಲ್ಲೆಯಿಂದ ರಕ್ತ ಸ್ರಾವವಾಗಿ ಬಿದ್ದಿದ್ದ ಗಿರೀಶ್ ನನ್ನು ಕುಣಿಗಲ್ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಘಟನೆ ಸಂಬಂಧ ಕುಣಿಗಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಹಲ್ಲೆ ನಡೆಸಿದ್ದ ಕೃಷ್ಣಪ್ಪ ಹಾಗೂ ಆತನ ಪುತ್ರ ಆನಂದ್ ನನ್ನು ಕುಣಿಗಲ್ ಪೊಲೀಸರು ಬಂಧಿಸಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL
ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA