ತುಮಕೂರು: ಅಂಬೇಡ್ಕರನ್ನು ನಿಂದಿಸಿ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದ ಪರಿಶಿಷ್ಟ ಜಾತಿಯ ಯುವತಿಯನ್ನು ಹೊಸ ಬಡಾವಣೆ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಆದಿ ದ್ರಾವಿಡ ಜನಾಂಗದ ವೇದಾವತಿ ಎಂಬ ಯುವತಿ ಕಲ್ಲಹಳ್ಳಿಯ ಗ್ರಾಮದವಳಾಗಿದ್ದು, ತನಗೆ ಸಂಬಂಧಿಕರಿಂದ ಅನ್ಯಾಯವಾಗಿದೆ. ಅಂಬೇಡ್ಕರ್ ರಚಿಸಿರುವ ಕಾನೂನಿನಿಂದ ಯಾವುದೇ ರೀತಿಯ ನ್ಯಾಯ ಸಿಗುತ್ತಿಲ್ಲ ನನಗೆ ಎಂದು ವಿಡಿಯೋದಲ್ಲಿ ನಿಂದಿಸಿದ್ದಳು.
ಈ ವಿಡಿಯೋ ಆಧಾರದ ಮೇಲೆ ತುಮಕೂರಿನ ಕುವೆಂಪು ನಗರದ ಶ್ರೀನಿವಾಸ್ ಎಂಬುವರು ಈಕೆಯ ವಿರುದ್ಧ ದೂರು ಸಲ್ಲಿಸಿದ್ದರು. ಇದರ ಆಧಾರದ ಮೇಲೆ ಹೊಸ ಬಡಾವಣೆ ಠಾಣೆ ಪೊಲೀಸರು ಆಕೆಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.
ಸಂಬಂಧಿಕರೊಂದಿಗಿನ ವೈಮನಸ್ಸಿನಿಂದಾಗಿ ತನಗೆ ಕಾನೂನಿನಿಂದ ನ್ಯಾಯ ಸಿಗುತ್ತಿಲ್ಲ ಎಂದು ಆರೋಪಿಸಿರುವ ಯುವತಿ, ಅಂಬೇಡ್ಕರ್ ಬಗ್ಗೆ ಅತ್ಯಂತ ಹೀನ ಶಬ್ಧಗಳನ್ನು ಬಳಸಿ ನಿಂದಿಸಿದ್ದಳು. ಈ ಸಂದರ್ಭ ಯುವತಿಯನ್ನು ಸಂಪರ್ಕಿಸಿ, ಏನು ಸಮಸ್ಯೆ ಎಂದು ವಿಚಾರಿಸಿ ಬುದ್ಧಿ ಹೇಳಲು ಸಂಘಟನೆಗಳ ಮುಖಂಡರು ಮುಂದಾದಾಗ ಅವರನ್ನು ಕೂಡ ಹೀನಾಯವಾಗಿ ಬೈದಿರುವ ಆರೋಪ ಕೇಳಿ ಬಂದಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy