ತುಮಕೂರು: ತಿಪಟೂರು ನಗರ ಪೊಲೀಸ್ ಠಾಣೆಯಲ್ಲಿ ದೇವರ ವಿಗ್ರಹಗಳನ್ನು ತಂದು ವಿಶೇಷ ಪೂಜೆ ಹಾಗೂ ಎಡೆಸೇವೆ ಸಲ್ಲಿಸಲಾಗಿದ್ದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
ತಿಪಟೂರು ಪಟ್ಟಣದ ಶ್ರೀ ಭೂತ ರಾಯ ಸ್ವಾಮಿ, ಕೆಂಪಮ್ಮ ದೇವಿ ಮತ್ತು ಚಿಕ್ಕಮ್ಮ ದೇವಿ ದೇವರುಗಳನ್ನು ಮೆರವಣಿಗೆಯಲ್ಲಿ ಕರೆತಂದು ಪೊಲೀಸರು ಠಾಣೆಯಲ್ಲಿಯೇ ವಿಶೇಷ ಪೂಜೆಯನ್ನು ಸಲ್ಲಿಸಿದರು ಅದರಲ್ಲೂ ಮಹಿಳಾ ಪೊಲೀಸರಂತು ಆರತಿ ಬೆಳಗಿ ಪ್ರತಿಯೊಬ್ಬರಿಗೂ ಪ್ರಸಾದವನ್ನು ಹಂಚಿದರು.
ಇನ್ನು ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಹಾಗೂ ಎಲ್ಲಾ ಸಿಬ್ಬಂದಿಗಳು ಈ ದೇವತಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy