ತುಮಕೂರು: ಬಾಡಿಗೆ ಇದೆ ಎಂದು ಹೇಳಿ ಸ್ನೇಹಿತರ ಜೊತೆಗೆ ತೆರಳಿದ್ದ ಆಟೋ ಚಾಲಕ ಶವವಾಗಿ ಪತ್ತೆಯಾದ ಘಟನೆ ಮಧುಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮಧುಗಿರಿ ಪಟ್ಟಣದ ಶ್ರೀಧರ್ ಮೂರ್ತಿ (45) ಮೃತ ದುರ್ದೈವಿ. ಪಟ್ಟಣದ ಅಗ್ನಿಶಾಮಕ ಠಾಣೆ ಬಳಿ ವಾಸವಿದ್ದ ಶ್ರೀಧರ್ ಮೂರ್ತಿ, ಸ್ನೇಹಿತ ವೆಂಕಟೇಶ್ ಜೊತೆ ಬಾಡಿಗೆ ಇದೆ ಎಂದು ಮನೆಯಿಂದ ಹೋಗಿದ್ದ. ಬಳಿಕ ರಾತ್ರಿಯಾದರೂ ಮನೆಗೆ ಬಾರದೇ ಇದ್ದಾಗ ಗಾಬರಿಯಾಗಿದ್ದ ಕುಟುಂಬಸ್ಥರು, ವೆಂಕಟೇಶ್ ಗೆ ಕರೆ ಮಾಡಿ ಕೇಳಿದಾಗ ಯಾರೋ ಮೂವರ ಜೊತೆ ಕಾರಿನಲ್ಲಿ ತೆರಳಿದ್ದಾಗಿ ತಿಳಿಸಿದ್ದರು.
ಆದರೆ, ಬೆಳಗ್ಗೆ ಮಧುಗಿರಿ– ಗೌರಿಬಿದನೂರು ಬೈಪಾಸ್ ರಸ್ತೆಯಲ್ಲಿರುವ ಇಟ್ಟಿಗೆ ಫ್ಯಾಕ್ಟರಿ ಬಳಿ ಶ್ರೀಧರ್ ಮೂರ್ತಿ ಮೃತದೇಹ ಪತ್ತೆಯಾಗಿದೆ ಎಂದು ಪೊಲೀಸರು ಕುಟುಂಬಸ್ಥರಿಗೆ ಕರೆ ಮಾಡಿ ತಿಳಿಸಿದ್ದಾರೆ.
ಶ್ರೀಧರ್ ಮೂರ್ತಿ ಸಾವಿನ ಬಗ್ಗೆ ಸ್ನೇಹಿತ ವೆಂಕಟೇಶ್ ಮೇಲೆ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ. ಕಾರಿನಲ್ಲಿ ಕರೆದುಕೊಂಡು ಹೋದ ಅಪರಿಚಿತರನ್ನ ಪತ್ತೆ ಹಚ್ಚಿ ನ್ಯಾಯ ಓದಗಿಸಬೇಕೆಂದು ಮಧುಗಿರಿ ಪೊಲೀಸ್ ಠಾಣೆಯಲ್ಲಿ ಕುಟುಂಬಸ್ಥರು ದೂರು ನೀಡಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy