ತುಮಕೂರು: ಮೇಕೆಗೆ ಸೊಪ್ಪು ತರಲು ಹೋಗಿ ಆಕಸ್ಮಿಕವಾಗಿ ಬಾವಿಗೆ ಬಿದ್ದ ಅಣ್ಣನನ್ನು ಕಾಪಾಡಲು ಹೋದ ಸಹೋದರರನ್ನು ಕೂಡ ಸಾವನ್ನಪ್ಪಿರುವ ದಾರುಣ ಘಟನೆ ಶಿರಾ ತಾಲೂಕಿನ ದ್ವಾರನ ಕುಂಟೆ ಗ್ರಾಮದಲ್ಲಿ ನಡೆದಿದೆ.
ಪಟ್ಟನಾಯಕನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು ಶಿರಾ ತಾಲೂಕಿನ ದ್ವಾರನ ಕುಂಟೆ ಗ್ರಾಮದ ಸತೀಶ್ (32) ಪ್ರಸನ್ನ (29) ಎಂದು ಗುರುತಿಸಲಾಗಿದೆ.
ಮೇಕೆಗೆ ಸೊಪ್ಪು ತರಲು ಹೋದ ಸತೀಶ್ ಮರದಿಂದ ಆಯಾ ತಪ್ಪಿ ಬಾವಿಗೆ ಬಿದ್ದಿದ್ದಾನೆ. ಬಾವಿಗೆ ಬಿದ್ದ ಅಣ್ಣನನ್ನು ಕಾಪಾಡಲು ಹೋದ ಸಹೋದರ ಸಹ ನೀರಿನಲ್ಲಿ ಮುಳುಗಿ ಸಾವನಪ್ಪಿದ್ದರು. ಈ ಸಂಬಂಧ ಪಟ್ಟನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy