ತುಮಕೂರು: ಇಂದು ಜಿಲ್ಲೆಯಲ್ಲಿ ಶಕ್ತಿ ಯೋಜನೆಗೆ ಚಾಲನೆ ದೊರೆಯಲಿದ್ದು, ಬಾಲಕಿಯರು, ಯುವತಿಯರು ಸೇರಿದಂತೆ ಜಿಲ್ಲೆಯ ಸುಮಾರು 14 ಲಕ್ಷ ಮಹಿಳೆಯರು ಈ ಯೋಜನೆಯ ಫಲಾನುಭವಿಗಳಾಗಳಿದ್ದಾರೆ ಎಂದು ಅಂದಾಜಿಸಲಾಗಿದೆ.
ಜಿಲ್ಲೆಯಲ್ಲಿರುವ 7 ಕೆ ಎಸ್ ಆರ್ ಟಿ ಸಿ ಸಾರಿಗೆ ಘಟಕಗಳಿಂದ ನಿತ್ಯ 560 ಬಸ್ಸುಗಳು ಸಂಚರಿಸಲಿದ್ದು, ಪ್ರತಿನಿತ್ಯ 1 ಲಕ್ಷ ಮಹಿಳಾ ಪ್ರಯಾಣಿಕರು ಒಡಾಡುವರು.
ತುಮಕೂರು ಜಿಲ್ಲಾಡಳಿದಿಂದ ಯೋಜನೆಗೆ ಅಧಿಕೃತವಾಗಿ ಜಾರಿಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ತುಮಕೂರು ಬಸ್ ನಿಲ್ದಾಣದಲ್ಲಿ ಉಸ್ತುವಾರಿ ಸಚಿವ ಜಿ.ಪರಮೇಶ್ವರರಿಂದ ಚಾಲನೆ ನೀಡುವರು. ಮಹಿಳೆಯರಿಗೆ ಶೂನ್ಯ ಟಿಕೆಟ್ ಕೊಡುವ ಮೂಲಕ ಚಾಲನೆ ನೀಡುವರು.
ಈಗಾಗಲೇ ಈ ಯೋಜನೆ ಕುರಿತು ಖಾಸಗಿ ಬಸ್ ಮಾಲೀಕರು ಎಂಬ ಆತಂಕವನ್ನು ವ್ಯಕ್ತಪಡಿಸಿದ್ದಾರೆ. ಖಾಸಗಿ ಬಸ್ ಗಳನ್ನು ಜಿಲ್ಲೆಯಲ್ಲಿ ಓಡಾಡಿಸುವುದು ತೊಂದರೆ ಆಗಲಿದೆ ಮಹಿಳಾ ಪ್ರಯಾಣಿಕರು ಹೆಚ್ಚಾಗಿ ಓಡಾಡಲು ಮುಂದಾಗಲಿದ್ದಾರೆ. ಇದರಿಂದ ಬಸ್ ವ್ಯವಹಾರವನ್ನೆ ಸ್ಥಗಿತಗೊಳಿಸುವ ಸ್ಥಿತಿ ನಿರ್ಮಾಣವಾಗಲಿದೆ ಎಂದು ಕಂಗಾಲಾಗಿದ್ದಾರೆ. ಹೀಗಾಗಿ ನಮ್ಮ ಹೀನಾಯ ಸ್ಥಿತಿಯನ್ನು ಅವಲೋಕಿಸಿ ಸರ್ಕಾರ ನಮಗೂ ಪರಿಹಾರ ಮಾರ್ಗವನ್ನು ತೋರಿಸಬೇಕಿದೆ ಎಂದು ಅಳಲು ತೋಡಿಕೊಳ್ಳುತ್ತಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L2Uvw2cNJZO5mXqIX4WA7h
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA