ತುಮಕೂರು ನಗರ: ಮೆಡಿಕಲ್ ಶಾಪ್ ನ ಶಟರ್ ಮುರಿದು ಒಳಗೆ ನುಗ್ಗಿದ ಕಳ್ಳ ಹಣಕ್ಕಾಗಿ ಹುಡುಕಾಡಿ, ಕೊನೆಗೆ ಚಿಲ್ಲರೆ ಹಣ ತೆಗೆದುಕೊಂಡು ವಾಪಸ್ ಹೋದ ಘಟನೆ ತುಮಕೂರು ನಗರದ ಬಿ.ಎಚ್ ರಸ್ತೆಯಲ್ಲಿರುವ ಪಾಲನೇತ್ರಯ್ಯ ಮೆಡಿಕಲ್ ಶಾಪ್ ನಲ್ಲಿ ನಡೆದಿದೆ.
ಮುಖಕ್ಕೆ ಮಂಕಿ ಕ್ಯಾಪ್ ಧರಿಸಿ ಕಳ್ಳತನಕ್ಕೆ ಬಂದಿದ್ದ ಕಳ್ಳ, ಮೆಡಿಕಲ್ ಶಾಪ್ ನ ಶಟರ್ ಮುರಿದು ಒಳಗೆ ನುಗ್ಗಿದ್ದಾನೆ. ನಾಲ್ಕೈದು ನಿಮಿಷಗಳ ಕಾಲ ಮೆಡಿಕಲ್ ಶಾಪ್ ನಲ್ಲಿ ಹಣಕ್ಕಾಗಿ ಹುಡುಕಾಟ ನಡೆಸಿದ್ದಾನೆ.
ಸಾಕಷ್ಟು ಹುಡುಕಾಡಿದರೂ ಹಣ ಸಿಗದೇ ಹೋದಾಗ ಕೊನೆಗೆ ಚಿಲ್ಲರೆ ಹಣವನ್ನು ತೆಗೆದುಕೊಂಡು ಸ್ಥಳದಿಂದ ಪರಾರಿಯಾಗಿದ್ದಾನೆ. ಘಟನೆಯ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಎನ್.ಇ.ಪಿ.ಎಸ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L2Uvw2cNJZO5mXqIX4WA7h
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA