ತುರುವೇಕೆರೆ : ಬೊಗಸೆ ಯಲ್ಲಿ ಸಮುದ್ರದ ನೀರಿನ ಮಾದರಿ ಕಾಣಬಹುದು, ಸಮುದ್ರ ಕಾಣುವುದಿಲ್ಲ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಒಂದು ವಿಶಾಲವಾದ ಸಮುದ್ರ. ಗ್ರಾಮೀಣ ಅಭಿವೃದ್ಧಿಗೆ ಪೂರಕವಾಗಿ ಹೆಗ್ಗಡವರ ಚಿಂತನೆಯಿಂದ ರೂಪುಗೊಂಡ ಒಂದೊಂದು ಯೋಜನೆಗಳು ವಿಶಾಲವಾದ ಸಮುದ್ರದ ನೀರನ್ನು ಬೊಗಸೆಯಲ್ಲಿ ಎತ್ತಿದಂತೆ.., ಹಳ್ಳಿಯ ಮನಸ್ಸುಗಳನ್ನು ಹತ್ತಿರದಿಂದ ಆಲಿಸಿ ಅವುಗಳಿಗೆ ಜೀವ ನೀಡಲಾಗಿದೆ. ಜ್ಞಾನವಿಕಾಸ ಕಾರ್ಯಕ್ರಮವು ಗ್ರಾಮೀಣ ಮಹಿಳೆಯರ ಪ್ರತಿಭೆಗಳ ಅನಾವರಣಕ್ಕೆ ಇರುವ ಒಂದು ಅಭೂತಪೂರ್ವ ವೇದಿಕೆ ಎಂದು ಜಿಲ್ಲಾ ನಿರ್ದೇಶಕಿ ಜಯಶೀಲ ತಿಳಿಸಿದರು.
ಇವರು ತುರುವೇಕೆರೆ ಗ್ರಾಮಾಂತರ ಯೋಜನಾ ಕಚೇರಿಯಲ್ಲಿ ನಡೆದ ಜ್ಞಾನವಿಕಾಸ ಸೇವಾ ಪ್ರತಿನಿಧಿಗಳ ವಾರ್ಷಿಕ ಕ್ರಿಯಾ ಯೋಜನೆ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಸಭೆಯಲ್ಲಿ ಬೆಂಗಳೂರು ಪ್ರಾದೇಶಿಕ ಕಚೇರಿಯ ಜ್ಞಾನವಿಕಾಸ ಯೋಜನಾಧಿಕಾರಿ ಸಂಧ್ಯಾ ಶೆಟ್ಟಿ ಮಾತನಾಡಿ ಯೋಜನೆಯ ಕಾರ್ಯಕರ್ತರು ಜ್ಞಾನವನ್ನು ಪಡೆದುಕೊಳ್ಳುವಲ್ಲಿ ಸದಾ ಹಕ್ಕಿಯಂತೆ ಹೆಕ್ಕಿ ತಿನ್ನುವವರಾಗಬೇಕು ಎಂದು ಕ್ರಿಯಾ ಯೋಜನೆಯ ಸಮರ್ಪಕ ಅನುಷ್ಠಾನದ ಕುರಿತು ಮಾಹಿತಿ ನೀಡಿದರು.
ಈ ಸಭೆಯಲ್ಲಿ ಕ್ಷೇತ್ರ ಯೋಜನಾಧಿಕಾರಿಗಳಾದ ಅನಿತಾ ಶೆಟ್ಟಿ, ಯಶೋಧರ್ , ಜಿಲ್ಲಾ ಸಮನ್ವಯ ಅಧಿಕಾರಿ ಪದ್ಮಲತಾ. ಸಂಯೋಜಕಿ ಅಶ್ವಿನಿ , ಲಾವಣ್ಯ ಇತರರು ಉಪಸ್ಥಿತರಿದ್ದರು.
ವರದಿ: ಸುರೇಶ್ ಬಾಬು ಎಂ. ತುರುವೇಕೆರೆ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L2Uvw2cNJZO5mXqIX4WA7h
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA