ತುರುವೇಕೆರೆ: ತಾಲೂಕಿನ ಮಾಯಸಂದ್ರ ಟಿ.ಬಿ.ಕ್ರಾಸ್ ನಲ್ಲಿರುವ ಎಸ್ ಬಿಜಿ ಮಹಾ ವಿದ್ಯಾಲಯದ ದೈಹಿಕ ಶಿಕ್ಷಕರಾದ ಉದಯ್ ಕುಮಾರ್ ನೇತೃತ್ವದ ಕರ್ನಾಟಕದ ತಂಡ ಟೇಬಲ್ ಟೆನಿಸ್ ತಂಡ ರಾಷ್ಟ್ರಮಟ್ಟದ ಚಿನ್ನದ ಪದಕವನ್ನು ಗೆದ್ದಿದೆ.
ಇದೇ ತಿಂಗಳ ದಿನಾಂಕ 6 ರಿಂದ 13 ರವರೆಗೆ ಭೋಪಾಲ್ ನ ,ಟಿ.ಟಿ.ಸ್ಟೇಡಿಯಂನಲ್ಲಿ ನಡೆದ 19 ವರ್ಷದೊಳಗಿನ ಬಾಲಕರ ಟೇಬಲ್ ಟೆನಿಸ್ ಕ್ರೀಡೆಯಲ್ಲಿ ಮಹಾರಾಷ್ಟ್ರದ ತಂಡದ ವಿರುದ್ಧ ಉದಯ್ ಕುಮಾರ್ ರವರ ನೇತೃತ್ವದ ತಂಡ ರಾಷ್ಟ್ರಮಟ್ಟದ ಚಿನ್ನದ ಪದಕವನ್ನು ಗೆದ್ದು ವಿಜೇತರಾಗಿ ಹೊರಹಮ್ಮಿದ್ದಾರೆ .
ಈ ತಂಡದಲ್ಲಿ 1 .ಆಕಾಶ್ ಕೆ ಜೆ , 2 .ರೋಹಿತ್ ಶಂಕರ್, 3. ಯಶವಂತ್ ಪಿ, 4. ಆದಿತ್ಯ ಜಿ , 4. ವಿಲಿಯನ್ ಥಾಮಸ್. ಕ್ರೀಡಾಕೂಟದಲ್ಲಿ ಭಾಗವಹಿಸಿದ ಕ್ರೀಡಾಪಟುಗಳಾಗಿರುತ್ತಾರೆ.
ವರದಿ: ಸುರೇಶ್ ಬಾಬು ಎಂ. ತುರುವೇಕೆರೆ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L2Uvw2cNJZO5mXqIX4WA7h
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA