nammatumakuru

    Subscribe to Updates

    Get the latest creative news from FooBar about art, design and business.

    What's Hot

    ಬಜೆಟ್ ಅಧಿವೇಶನದಲ್ಲಿ ಒಳಮೀಸಲು ಜಾರಿಗೊಳಿಸಿ: ತುಮಕೂರಿನಲ್ಲಿ ಬೃಹತ್ ಪ್ರತಿಭಟನೆ

    February 24, 2026

    ಅಂತರರಾಜ್ಯ ಜ್ಯುವೆಲರಿ ಸುಲಿಗೆಕೋರರ ಸೆರೆ:  ಕೃತ್ಯ ನಡೆದ 12 ತಾಸಿನೊಳಗೆ ಆರೋಪಿಗಳ ಬೆನ್ನಟ್ಟಿ ಬಂಧನ

    February 24, 2026

    ಶಿವಮೊಗ್ಗ: ಸಹಪಾಠಿಗಳ ಜಗಳ ಬಿಡಿಸಲು ಹೋದ SSLC  ವಿದ್ಯಾರ್ಥಿ ಬಲಿ

    February 24, 2026
    Facebook Twitter Instagram
    ಟ್ರೆಂಡಿಂಗ್
    • ಬಜೆಟ್ ಅಧಿವೇಶನದಲ್ಲಿ ಒಳಮೀಸಲು ಜಾರಿಗೊಳಿಸಿ: ತುಮಕೂರಿನಲ್ಲಿ ಬೃಹತ್ ಪ್ರತಿಭಟನೆ
    • ಅಂತರರಾಜ್ಯ ಜ್ಯುವೆಲರಿ ಸುಲಿಗೆಕೋರರ ಸೆರೆ:  ಕೃತ್ಯ ನಡೆದ 12 ತಾಸಿನೊಳಗೆ ಆರೋಪಿಗಳ ಬೆನ್ನಟ್ಟಿ ಬಂಧನ
    • ಶಿವಮೊಗ್ಗ: ಸಹಪಾಠಿಗಳ ಜಗಳ ಬಿಡಿಸಲು ಹೋದ SSLC  ವಿದ್ಯಾರ್ಥಿ ಬಲಿ
    • ರಾಜಕೀಯ ಕಾರಣಕ್ಕೆ ಹೆಚ್‌ ಡಿಕೆಯವರನ್ನು ಭೇಟಿಯಾಗಿಲ್ಲ: ಗೃಹ ಸಚಿವ ಜಿ.ಪರಮೇಶ್ವರ್ ಸ್ಪಷ್ಟನೆ
    • ಸರ್ಕಾರಿ ಹುದ್ದೆಗಳ ನೇಮಕಾತಿಗೆ ಆಗ್ರಹಿಸಿ ಧಾರವಾಡದಲ್ಲಿ ವಿದ್ಯಾರ್ಥಿಗಳ ಬೃಹತ್ ಪ್ರತಿಭಟನೆ
    • ಕಾಂತಾರಾ ಅಪಹಾಸ್ಯ ಪ್ರಕರಣ: ನಾಲಿಗೆ ಮೇಲೆ ಹಿಡಿತ ಇರ್ಬೇಕು:  ನಟ ರಣವೀರ್ ಸಿಂಗ್‌ ಗೆ ಹೈಕೋರ್ಟ್ ಚಾಟಿ!
    • ಗರ್ಭಿಣಿ ಪತ್ನಿಗೆ ಚಾಕುವಿನಿಂದ ಇರಿದು, ಬಾವಿಗೆ ಹಾರಿದ ಪತಿ: ಪತ್ನಿ ಅಪಾಯದಿಂದ ಪಾರು, ಪತಿ ಸಾವು
    • ಸಂವಿಧಾನ ಒಂದು ಜಾತಿ ವರ್ಗಕ್ಕೆ ಸೀಮಿತ ಎನ್ನುವುದು ಅಪಪ್ರಚಾರ: ಸಿ.ಬಿ.ಶಶಿಧರ್
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಮಾಸ್ಟರ್ ಆನಂದ್‌ 118. 50 ಲಕ್ಷ ವಂಚನೆ: ಲೀಪ್ ವೆಂಚರ್ಸ್ ಕಂಪನಿ ವಿರುದ್ಧ ಎಫ್‌ಐಆರ್
    ರಾಜ್ಯ ಸುದ್ದಿ June 26, 2023

    ಮಾಸ್ಟರ್ ಆನಂದ್‌ 118. 50 ಲಕ್ಷ ವಂಚನೆ: ಲೀಪ್ ವೆಂಚರ್ಸ್ ಕಂಪನಿ ವಿರುದ್ಧ ಎಫ್‌ಐಆರ್

    By adminJune 26, 2023No Comments2 Mins Read
    ananda

    ಚಿತ್ರನಟ, ನಿರ್ದೇಶಕ ಮಾಸ್ಟರ್ ಆನಂದ್ ಅವರಿಂದ ನಿವೇಶನ ಹೆಸರಿನಲ್ಲಿ 118. 50 ಲಕ್ಷ ಮುಂಗಡ ಹಣ ಪಡೆದು ವಂಚಿಸಲಾಗಿದ್ದು, ಈ ಬಗ್ಗೆ ಚಂದ್ರಾಲೇಔಟ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

    ‘ಕೆಂಗೇರಿ ಉಪನಗರ ಅರುಣಾಚಲ ಬಡಾವಣೆಯ ನಿವಾಸಿ ಎಚ್. ಆನಂದ್ ಉರುಫ್ ಮಾಸ್ಟರ್ ಆನಂದ್ (39) ವಂಚನೆ ಬಗ್ಗೆ ದೂರು ನೀಡಿದ್ದಾರೆ. ಚಂದ್ರಾಲೇಔಟ್‌ನ ಇನ್‌ಕಮ್ ಟ್ಯಾಕ್ಸ್ ಬಡಾವಣೆಯಲ್ಲಿರುವ ಮಲ್ಟಿ ಲೀಪ್ ವೆಂಚರ್ಸ್ ಕಂಪನಿಯ ಮಾಲೀಕ ಎಸ್. ಸುಧೀರ್, ಆಪ್ತ ಸಹಾಯಕಿ ಮನಿಕಾ ಕೆ. ಎಂ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.


    Provided by
    Provided by

    2020ರ ಸೆಪ್ಟೆಂಬರ್ 23ರಿಂದ 2021ರ ಅಕ್ಟೋಬರ್ 7ರ ಅವಧಿಯಲ್ಲಾದ ವಂಚನೆ ಇದಾಗಿದೆ. ಹಣ ವರ್ಗಾವಣೆ ದಾಖಲೆ, ಖರೀದಿ ಕರಾರು ಪತ್ರ ಹಾಗೂ ಇತರೆ ಪುರಾವೆಗಳನ್ನು ಪರಿಶೀಲಿಸಲಾಗುತ್ತಿದೆ. ಆರೋಪಿಗಳು ತಲೆಮರೆಸಿಕೊಂಡಿದ್ದಾರೆ’ ಎಂದು ಮೂಲಗಳು ತಿಳಿಸಿವೆ.

    ದೂರಿನ ವಿವರ: ‘ಕೊಮ್ಮಘಟ್ಟದ ರಾಮಸಂದ್ರ ಗ್ರಾಮಕ್ಕೆ 2020ರ ಜುಲೈನಲ್ಲಿ ಚಿತ್ರೀಕರಣಕ್ಕೆಂದು ಹೋದಾಗ, ನಿವೇಶನಗಳನ್ನು ನೋಡಿದ್ದೆ. ಅಲ್ಲಿಯ ಕಚೇರಿಯಲ್ಲಿ ಮನಿಕಾ ಕೆ. ಎಂ ಅವರನ್ನು ಭೇಟಿಯಾಗಿದ್ದೆ. ನಿವೇಶನ ಖರೀದಿಸಲು ಸಾಲ ಸೌಲಭ್ಯ ಹಾಗೂ ಆಕರ್ಷಕ ಕೊಡುಗೆ ಇರುವುದಾಗಿ ಮನಿಕಾ ಆಮಿಷವೊಡ್ಡಿದ್ದರು’ ಎಂದು ಮಾಸ್ಟರ್ ಆನಂದ್ ದೂರಿನಲ್ಲಿ ತಿಳಿಸಿದ್ದಾರೆ.

    ಮನಿಕಾ ಹಾಗೂ ಇತರರು ಪದೇ ಪದೇ ಕರೆ ಮಾಡಿ ನಿವೇಶನ ಖರೀದಿಸಲು ಮನವೊಲಿಸಿದರು. ಮಲ್ಟಿ ಲೀಪ್ ವೆಂಚರ್ಸ್ ಕಂಪನಿ ಕಚೇರಿಗೆ ಹೋಗಿ, ಆರೋಪಿಗಳನ್ನು ಭೇಟಿಯಾಗಿದ್ದೆ. ರಾಮಸಂದ್ರದಲ್ಲಿರುವ 2000 ಅಡಿ ವಿಸ್ತೀರ್ಣದ ನಿವೇಶನ ತೋರಿಸಿದ್ದರು. ಕೆ 70 ಲಕ್ಷಕ್ಕೆ ಖರೀದಿ ಒಪ್ಪಂದವಾಯಿತು. ಹಂತ ಹಂತವಾಗಿ 18. 50 ಲಕ್ಷ ಮುಂಗಡ ಹಣ ನೀಡಿದ್ದೆ. ಉಳಿದ ಹಣಕ್ಕೆ ಸಾಲ ಕೊಡಿಸುವುದಾಗಿ ಆರೋಪಿಗಳು ಭರವಸೆ ನೀಡಿದ್ದರು.

    ನನ್ನ ಹಾಗೂ ಪತ್ನಿ ಯಶಸ್ವಿನಿ ಹೆಸರಿನಲ್ಲಿ ಖರೀದಿ ಕರಾರು ಪತ್ರ ಮಾಡಿಕೊಟ್ಟಿದ್ದರು’ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ‘ಆರೋಪಿಗಳು ಎಲ್ಲಿಯೂ ಸಾಲ ಕೊಡಿಸಲಿಲ್ಲ. ಈ ಮಧ್ಯೆ ಆರೋಪಿಗಳು ನಿವೇಶನವನ್ನು ಬೇರೆಯವರಿಗೆ ಮಾರಾಟ ಮಾಡಿದ್ದಾರೆ. ಈ ಬಗ್ಗೆ ನನಗೆ ಮಾಹಿತಿ ನೀಡಿಲ್ಲ, ಮುಂಗಡ ಹಣವನ್ನೂ ಮರಳಿಸಿಲ್ಲ. ವಿಚಾರಿಸಿದಾಗಆರೋಪಿಗಳು ಸ್ಪಂದಿಸಲಿಲ್ಲ.

    ಸುಳ್ಳು ಭರವಸೆ, ಕೊಡುಗೆಗಳ ಆಮಿಷವೊಡ್ಡಿ ನಿವೇಶನ ಮಾರಾಟದ ಹೆಸರಿನಲ್ಲಿ ಹಲವರನ್ನು ವಂಚಿಸಿರುವ ಅವರ ವಿರುದ್ಧ ಕ್ರಮಕೈಗೊಳ್ಳಿ’ ಎಂದು ದೂರಿನಲ್ಲಿ ಆಗ್ರಹಿಸಿದ್ದಾರೆ.

    ‘ಆಮಿಷವೊಡ್ಡಿ ವಂಚನೆ: ಬುಡ್ಸ್ ಕಾಯ್ದೆಯಡಿ ಪ್ರಕರಣ’ ‘ನಿವೇಶನ ಹೂಡಿಕೆ ಹಾಗೂ ಇತರೆ ಆಮಿಷವೊಡ್ಡಿ ಮಾಸ್ಟರ್ ಆನಂದ್ ರೀತಿಯಲ್ಲಿ ಮತ್ತಷ್ಟು ಮಂದಿಗೆ ಆರೋಪಿಗಳು ವಂಚನೆ ಮಾಡಿರುವ ಅನುಮಾನವಿದೆ. ಅನಿಯಂತ್ರಿತ ಉಳಿತಾಯ ಯೋಜನೆಗಳ ನಿಷೇಧ (ಬಿಯುಡಿಎಸ್) ಕಾಯ್ದೆ 2019ರಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ. ‘ಆರೋಪಿಗಳಿಂದ ನಿವೇಶನ ಹೆಸರಿನಲ್ಲಿ ಯಾರಿಗಾದರೂ ವಂಚನೆಯಾಗಿದ್ದರೆ ಠಾಣೆಗೆ ದೂರು ನೀಡಬಹುದು’ ಎಂದು ತಿಳಿಸಿವೆ.

    ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.

    ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

    admin
    • Website

    Related Posts

    ಶಿವಮೊಗ್ಗ: ಸಹಪಾಠಿಗಳ ಜಗಳ ಬಿಡಿಸಲು ಹೋದ SSLC  ವಿದ್ಯಾರ್ಥಿ ಬಲಿ

    February 24, 2026

    ರಾಜಕೀಯ ಕಾರಣಕ್ಕೆ ಹೆಚ್‌ ಡಿಕೆಯವರನ್ನು ಭೇಟಿಯಾಗಿಲ್ಲ: ಗೃಹ ಸಚಿವ ಜಿ.ಪರಮೇಶ್ವರ್ ಸ್ಪಷ್ಟನೆ

    February 24, 2026

    ಕಾಂತಾರಾ ಅಪಹಾಸ್ಯ ಪ್ರಕರಣ: ನಾಲಿಗೆ ಮೇಲೆ ಹಿಡಿತ ಇರ್ಬೇಕು:  ನಟ ರಣವೀರ್ ಸಿಂಗ್‌ ಗೆ ಹೈಕೋರ್ಟ್ ಚಾಟಿ!

    February 24, 2026

    Comments are closed.

    Our Picks

    ಇಂಡಿಯಾ ಎಐ ಇಂಪ್ಯಾಕ್ಟ್ ಎಕ್ಸ್‌ಪೋ 2026: ಆಲೋಚನೆ ಮತ್ತು ನಾವೀನ್ಯತೆಗಳ ಪ್ರಬಲ ಸಂಗಮ ಎಂದ ಪ್ರಧಾನಿ ಮೋದಿ

    February 17, 2026

    ಬಿಹಾರದಲ್ಲಿ ತುಮಕೂರು ಮೂಲದ ಒಂದೇ ಕುಟುಂಬದ ನಾಲ್ವರ ನಿಗೂಢ ಸಾವು: ಪ್ರವಾಸಕ್ಕೆ ಹೋದವರು ಹೆಣವಾಗಿ ಮರಳಿದರು!

    February 7, 2026

    ಬೆಂಗಳೂರು–ಹೈದರಾಬಾದ್ ಹೈಸ್ಪೀಡ್ ರೈಲು ಬೀದರ್ ವರೆಗೆ ವಿಸ್ತರಿಸಿ: ರೈಲ್ವೆ ಸಚಿವರಿಗೆ ದೇವೇಗೌಡರ ಮನವಿ

    February 6, 2026

    ಜೀವನದಲ್ಲಿ ಕೊನೆಯ ಹಂತದಲ್ಲಿದ್ದೇನೆ, ನೀರಾವರಿ ಯೋಜನೆಗಳಿಗೆ ಅನುಮೋದನೆ ಕೊಡಿ: ಹೆಚ್.ಡಿ. ದೇವೇಗೌಡ ಗದ್ಗದಿತ

    February 5, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ತುಮಕೂರು

    ಬಜೆಟ್ ಅಧಿವೇಶನದಲ್ಲಿ ಒಳಮೀಸಲು ಜಾರಿಗೊಳಿಸಿ: ತುಮಕೂರಿನಲ್ಲಿ ಬೃಹತ್ ಪ್ರತಿಭಟನೆ

    February 24, 2026

    ತುಮಕೂರು: ಮುಂಬರುವ ಬಜೆಟ್ ಅಧಿವೇಶನದಲ್ಲಿ ನೇರ ನೇಮಕಾತಿ, ಪದೋನ್ನತಿ, ಬ್ಯಾಕ್‌ ಲಾಗ್, ಕೆಪಿಎಸ್‌ ಸಿ, ಬಿಡಿಎ ಹಾಗೂ ಸರ್ಕಾರಿ ಗುತ್ತಿಗೆ…

    ಅಂತರರಾಜ್ಯ ಜ್ಯುವೆಲರಿ ಸುಲಿಗೆಕೋರರ ಸೆರೆ:  ಕೃತ್ಯ ನಡೆದ 12 ತಾಸಿನೊಳಗೆ ಆರೋಪಿಗಳ ಬೆನ್ನಟ್ಟಿ ಬಂಧನ

    February 24, 2026

    ಶಿವಮೊಗ್ಗ: ಸಹಪಾಠಿಗಳ ಜಗಳ ಬಿಡಿಸಲು ಹೋದ SSLC  ವಿದ್ಯಾರ್ಥಿ ಬಲಿ

    February 24, 2026

    ರಾಜಕೀಯ ಕಾರಣಕ್ಕೆ ಹೆಚ್‌ ಡಿಕೆಯವರನ್ನು ಭೇಟಿಯಾಗಿಲ್ಲ: ಗೃಹ ಸಚಿವ ಜಿ.ಪರಮೇಶ್ವರ್ ಸ್ಪಷ್ಟನೆ

    February 24, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.