ಸಂಚಾರ ದಟ್ಟಣೆ ನಿಯಂತ್ರಣ ಕರ್ತವ್ಯದ ನಡುವೆಯೂ ಕೆಲವು ಸಂಚಾರ ಪೊಲೀಸರು ಮಾನವೀಯ ಕೆಲಸಗಳಿಗಾಗಿ ಆಗಾಗ್ಗೆ ಸುದ್ದಿಯಾಗುತ್ತಾರೆ.
ಮಳೆನೀರು ತೆರವು, ಸಂಚಾರಕ್ಕೆ ಅಡ್ಡಿಯಾದ ಜಲ್ಲಿಕಲ್ಲು ತೆರವು ಮಾಡುವುದು, ಬಿಸಿಲೆನ್ನದೆ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುತ್ತಾ ಸಾರ್ವಜನಿಕರ ಸೇವೆ ಮಾಡುತ್ತಾರೆ. ಆದರೆ ಇಲ್ಲೋರ್ವ ಟ್ರಾಫಿಕ್ ಕಾನ್ಸ್‌ಟೇಬಲ್ ಲಕ್ಷಾಂತರ ವಾಹನ ಸಂಚರಿಸುವ ರಸ್ತೆಯಲ್ಲಿ ಸಾಗುತ್ತಿದ್ದ ಮಾರುದ್ದದ ಕೆರೆ ಹಾವು ಹಿಡಿದು, ರಕ್ಷಿಸಿದ್ದಾರೆ.
ಟ್ರಾಫಿಕ್ ಜಂಜಾಟದ ನಡುವೆ ಸದಾಶಿವನಗರ ಟ್ರಾಫಿಕ್ ಪೊಲೀಸ್ ಠಾಣೆಯ ಕಾನ್ಸ್‌ಟೇಬಲ್ ರಾಕೇಶ್ ರಸ್ತೆಯಲ್ಲಿ ಸಾಗುತ್ತಿದ್ದ ಹಾವು ಹಿಡಿದು ರಕ್ಷಿಸಿ ಅದನ್ನು ಸುರಕ್ಷಿತ ಸ್ಥಳಕ್ಕೆ ಬಿಟ್ಟರು. ಇಂದು ಮಧ್ಯಾಹ್ನ ಎಂ. ಎಸ್. ರಾಮಯ್ಯ ವೃತ್ತದ ಬಳಿ ಕರ್ತವ್ಯಕ್ಕೆ ತೆರಳುವಾಗ ದಿಢೀರ್ ಹಾವು ಪ್ರತ್ಯಕ್ಷವಾಗಿದೆ. ಇದನ್ನು ಕಂಡ ಪಾದಚಾರಿಗಳು ಅರೆಕ್ಷಣ ಹೌಹಾರಿದ್ದಾರೆ. ಇದನ್ನು ಗಮನಿಸಿದ ರಾಕೇಶ್, ಕೂಡಲೇ ಅಲ್ಲೇ ಬಿದ್ದಿದ್ದ ಕೋಲಿನ ಸಹಾಯದಿಂದ ಹಾವು ಹಿಡಿದರು. ಕಾನ್ಸೆಬಲ್ ನಡೆಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IHoly2pCaZPEkuV6RjAGNC
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA