ತುಮಕೂರು: ಮುಕ್ತ—ಸಂವಾದ ವೇದಿಕೆ ಕರ್ನಾಟಕ ಇದರ ಎರಡನೇ ವರ್ಷದ ವಾರ್ಷಿಕೋತ್ಸವ ಹಾಗೂ ಬುದ್ಧ ಬೆಳದಿಂಗಳು ಕಾರ್ಯಕ್ರಮವನ್ನು ಜುಲೈ 2ರಂದು ತುಮಕೂರಿನ ಗೆದ್ದಲಹಳ್ಳಿಯ ಧಮ್ಮ ಲೋಕ ಬುದ್ಧ ವಿಹಾರದಲ್ಲಿ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದಲ್ಲಿ ಚಾಮರಾಜನಗರ ಉದ್ದೇಶಿತ ನಳಂದ ಬೌದ್ಧ ವಿಶ್ವವಿದ್ಯಾಲಯದ ಪೂಜ್ಯ ಬೋಧಿದತ್ತ ಥೇರ ಬಂತೇಜಿ ಧಮ್ಮ ಜ್ಯೋತಿ ಮತ್ತು ಧಮ್ಮನುಡಿಗಳನ್ನಾಡಲಿದ್ದಾರೆ. ತುಮಕೂರು ಧಮ್ಮಲೋಕ ಬುದ್ಧವಿಹಾರದ ಅಧ್ಯಕ್ಷರಾದ ಹನುವಂತರಾಯಪ್ಪ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ಪ್ರಾಧ್ಯಾಪಕ ಸುಭಾಷ್ ಚಂದ್ರ ಅವರು ಸ್ವಾಗತಿಸಲಿದ್ದಾರೆ. ಮಂಡ್ಯ ಮುಕ್ತ ಸಂವಾದ ವೇದಿಕೆ ಆಯೋಜಕರಾದ ಚೌಡೇಶ್ ಅವರು ಸಂವಿಧಾನದ ಪೀಠಿಕೆ ಓದಲಿದ್ದಾರೆ.
ಮುಖ್ಯ ಅತಿಥಿಗಳಾಗಿ ತುಮಕೂರು ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿದ್ಯಾ ಕುಮಾರಿ, ತುಮಕೂರು ಮಹಾನಗರ ಪಾಲಿಕೆಯ ಮಹಾ ಪೌರರಾದ ಪ್ರಭಾವತಿ ಸುದೇಶ್, ಜಿ.ಪಂ. ಮುಖ್ಯ ಲೆಕ್ಕಾಧಿಕಾರಿ ಕೆ.ಸಿ.ನರಸಿಂಹಮೂರ್ತಿ, ತುಮಕೂರು ಮುಕ್ತ ಸಂವಾದ ವೇದಿಕೆಯ ಅಧ್ಯಕ್ಷರಾದ ಎಸ್.ಆರ್.ಚಿಕ್ಕಣ್ಣ, ಬಾನುಲಿ ಪತ್ರಿಕೆ ಸಂಪಾದಕರು ಮತ್ತು ಸಾಮಾಜಿಕ ಹೋರಾಟಗಾರರಾದ ಭಾನುಪ್ರಕಾಶ್ ಭಾಗವಹಿಸಲಿದ್ದಾರೆ.
ಉಪನ್ಯಾಸ ಕಾರ್ಯಕ್ರಮ:
ಶಿಕ್ಷಕರಾದ ಜಿತೇಂದ್ರ ತಳವಾರ್ ಡಾ.ಬಿ,ಆರ್,ಅಂಬೇಡ್ಕರ್ ಅವರ ಜೀವನ ಚರಿತ್ರೆ ವಿಚಾರದಲ್ಲಿ ಉಪನ್ಯಾಸ ನೀಡಲಿದ್ದಾರೆ.
ನಿವೃತ್ತ ಪ್ರಾಂಶುಪಾಲರಾದ ವಿಠ್ಠಲ್ ದಾಸ್ ಪ್ಯಾಗೆ ಅವರು, ಪ್ರಸ್ತುತ ಸನ್ನಿವೇಶದಲ್ಲಿ ಧಮ್ಮ ಪ್ರಗತಿಗಾಗಿ ನಮ್ಮ ಎದುರಿಗಿರುವ ಸವಾಲುಗಳು ಎಂಬ ವಿಷಯದಲ್ಲಿ ಉಪನ್ಯಾಸ ನೀಡಲಿದ್ದಾರೆ.
ಸಂಪನ್ಮೂಲ ವ್ಯಕ್ತಿಗಳಾದ ಸಿದ್ದರಾಜು ಅವರು ಡಾ.ಬಾಬಾ ಸಾಹೇಬರ ದೃಷ್ಠಿಯಲ್ಲಿ ಯುವಕರ ಪಾತ್ರ ಎಂಬ ವಿಚಾರದಲ್ಲಿ ಉಪನ್ಯಾಸ ನೀಡಲಿದ್ದಾರೆ.
ನಿವೃತ್ತ ಶಿಕ್ಷಕರಾದ ಚೂಡಾಮಣಿರವರು ಧಮ್ಮ ವಂದನೆ ಮಾಡಲಿದ್ದಾರೆ. ಚಂದ್ರಶೇಖರ್ ಅವರು ಕಾರ್ಯಕ್ರಮದ ನಿರೂಪಣೆ ಮಾಡಲಿದ್ದಾರೆ ಎಂದು ಮುಕ್ತ ಸಂವಾದ ವೇದಿಕೆ ಕರ್ನಾಟಕ ಪ್ರಕಟಣೆಯಲ್ಲಿ ತಿಳಿಸಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IHoly2pCaZPEkuV6RjAGNC
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA