ಕೊರಟಗೆರೆ: ತಾಲೂಕಿನ ಕಸಬಾ ಹೋಬಳಿಯ ಬೋಡ ಬಂಡೆನಹಳ್ಳಿ ಗ್ರಾಮದಲ್ಲಿ ಏಕಾದಶಿ ಹಬ್ಬದ ಪ್ರಯುಕ್ತ ಇತಿಹಾಸ ಪ್ರಸಿದ್ದಿ ಇರುವಂತಹ ಬೆಟ್ಟದ ಮೇಲೆ ಗುಹೆಯೊಳಗೆ ನೆಲೆಸಿರುವ ತಿಮ್ಮಪ್ಪ ಹಾಗೂ ಆಂಜನೇಯನಿಗೆ ಗ್ರಾಮದ ಪ್ರತಿ ಮನೆಯಲ್ಲೂ ವಿಶೇಷ ನೈವೇದ್ಯವನ್ನ ತಯಾರು ಮಾಡಿ ಬುತ್ತಿ ಕಟ್ಟಿಕೊಂಡು ಬೆಟ್ಟಕ್ಕೆ ಹೋಗುವುದು ವಾಡಿಕೆ…
ಗ್ರಾಮದ ಹಿಂದೂ ಸಾದರು ಜನಾಂಗದ ಪ್ರತಿ ಮನೆಯಲ್ಲಿ ವಿಶೇಷ ನೈವೇದ್ಯದ ಬುತ್ತಿಯನ್ನು ಹೊತ್ತುಕೊಂಡು ಊರಿನ ಗ್ರಾಮ ದೇವತೆ ಶ್ರೀ ಚೌಡೇಶ್ವರಿ ತಾಯಿಗೆ ಪೂಜೆ ಸಲ್ಲಿಸಿ ಬೆಟ್ಟದ ಮೇಲೆ ನೆಲೆಸಿರುವ ತಿಮ್ಮಪ್ಪ ಹಾಗೂ ಆಂಜನೇಯನಿಗೆ ನೈವೇದ್ಯವನ್ನ ಅರ್ಪಿಸಿ ವಿಶೇಷ ಪೂಜೆ ಸಲ್ಲಿಸಿ ರೈತರು ತಮ್ಮ ಭೂಮಿಯಲ್ಲಿ ಬಿತ್ತಿರುವ ಬೆಳೆಯು ಕೈ ಸೇರುವಂತೆ ವರುಣ ದೇವರಲ್ಲಿ ಪ್ರಾರ್ಥಿಸುತ್ತಾರೆ.
ನಂತರ ಬೆಟ್ಟಕ್ಕೆ ಹೋಗಿರುವ ಭಕ್ತರು ಪ್ರತಿ ವರ್ಷದಂತೆ ಬಂಡೆಯ ಮೇಲೆ ನೈವೇದ್ಯವನ್ನ ಸೇವಿಸಿ ಹಿಂತಿರುಗುವುದು ಇಲ್ಲಿನ ಪದ್ಧತಿಯಾಗಿದೆ.ಇದೇ ಸಂದರ್ಭದಲ್ಲಿ ಗ್ರಾಮದ ಹಿರಿಯರು ಯುವಕರು ಮಹಿಳೆಯರು ಮಕ್ಕಳು ಪಾಲ್ಗೊಂಡಿದ್ದರು…
ವರದಿ: ಮಂಜುಸ್ವಾಮಿ ಎಂ.ಎನ್., ಕೊರಟಗೆರೆ…
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy