ತುರುವೇಕೆರೆ: ತಾಲೂಕಿನ ಕೊಂಡಜ್ಜಿ ಗ್ರಾಮದ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘಕ್ಕೆ ಸಾಮಾನ್ಯ ಕ್ಷೇತ್ರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಬಿಸಿಎಂಎ ಮತ್ತು ಬಿ ಸಿ ಎಂ ಬಿ ಕ್ಷೇತ್ರಗಳಿಗೆ ಚುನಾವಣೆ ನಡೆಯಿತು.
ಬಿಜೆಪಿ ಮುಖಂಡರಾದ ಕೊಂಡಜ್ಜಿ ವಿಶ್ವನಾಥ್ ರವರ ಬೆಂಬಲಿತ ಏಳು ಜನ ಅಭ್ಯರ್ಥಿಗಳಾದ ಲತಾ ಗಿರೀಶ್ ಕೆ ಸಿ.ಸುಮತಿ ಚಂದ್ರಶೇಖರ್, ಸಾವಿತ್ರಮ್ಮ ರಾಜಣ್ಣ ,ಪದ್ಮ ಗಂಗಾಧರ್, ತೀರ್ಥ ಶ್ರೀ ಪುರುಷೋತ್ತಮ್ , ಜಯಲಕ್ಷ್ಮಿ ಶಿವಣ್ಣ .ಜಗದಾಂಬ ರಮೇಶ್ ರವರುಗಳು ವಿಜಯಶಾಲಿಗಳಾಗಿದ್ದು, ಇವರ ಹೆಸರುಗಳು ಘೋಷಣೆಯಾದ ತಕ್ಷಣ ಬೆಂಬಲಿಗರು ಪಟಾಕಿ ಸಿಡಿಸಿ ಸಂಭ್ರಮಿಸಿ ಸಿಹಿ ಹಂಚಿದರು. ಅಧ್ಯಕ್ಷ ಗಾದಿಯೂ ಕೂಡ ವಿಶ್ವನಾಥ್ ರವರ ಬೆಂಬಲಿತರ ಪಾಲಿಗೆ ಬಂದಿದೆ.
ವಿಜಯಶಾಲಿಗಳಾದ ನೂತನ ಸದಸ್ಯರುಗಳಿಗೆ ಮುಖಂಡರಾದ ಕೊಂಡಜ್ಜಿ ಕೆ.ಎಸ್.ವಿಶ್ವನಾಥ್ ಹಾರ ಹಾಕಿ ಶಾಲು ಹೊದಿಸಿ ಅಭಿನಂದಿಸಿದರು.ಈ ಸಂದರ್ಭದಲ್ಲಿ ದಯಾನಂದ್. ಕೆ.ಸಿ.ಗಿರೀಶ್, ಗುಡಿ ಗೌಡ ಲೋಕೇಶ್, ಪುರುಷೋತ್ತಮ್, ಸಿದ್ದಲಿಂಗೇಗೌಡ ಇತರರು ಇದ್ದರು.
ವರದಿ: ಸುರೇಶ್ ಬಾಬು ಎಂ. ತುರುವೇಕೆರೆ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy