ನಮ್ಮತುಮಕೂರು ಸ್ಪೆಷಲ್ ರಿಪೋರ್ಟ್: ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಪರಿಹರಿಸುವ ದೃಷ್ಟಿಯಿಂದ ತುಮಕೂರು ನಗರದ ಜೀವ ಜಲವಾಗಿರುವ ಹೇಮಾವತಿ ನದಿ ನೀರು ಗುರುರಿನ ಹೇಮಾವತಿ ಜಲಾಶಯದಿಂದ ಬುಗುಡನಹಳ್ಳಿ ಜಲಸಂಗ್ರಹಕಾರಕ್ಕೆ ಹರಿದು ಬರುತ್ತಿದೆ.
ಹೌದು ಮುಂದಿನ ಒಂದು ವಾರದಲ್ಲಿ 300ಎಂಸಿಎಫ್ ಟೀ ಸಾಮರ್ಥ್ಯದ ಬುಗುಡನಹಳ್ಳಿ ಜಲಸಂಗ್ರಹಾಗಾರಕ್ಕೆ ನೀರು ಬಂದು ಸೇರಲಿದೆ.
ನಿತ್ಯ 45 ಎಂಸಿಎಫ್ ಟಿ ಯಷ್ಟು ನೀರು ಬಂದು ಸೇರುತ್ತಿದ್ದು ಸುಮಾರು 500 ಕ್ಯೂಸ್ ಪ್ರಮಾಣದಲ್ಲಿ ನೀರು ಹರಿವಿನ ಪ್ರಮಾಣದಲ್ಲಿದೆ. ಈ ಮೂಲಕ ಮುಂದಿನ ಐದು ತಿಂಗಳವರೆಗೆ ತುಮಕೂರು ನಗರದಲ್ಲಿ ಕುಡಿಯುವ ನೀರಿನ ಯಾವುದೇ ಸಮಸ್ಯೆ ಉದ್ಭವಿಸುವುದಿಲ್ಲ.
ಬುಗುಡನಹಳ್ಳಿ ಜಲಸಂಗ್ರಹಗಾರದಲ್ಲಿ ಪ್ರಸ್ತುತ 32 ಎಂಸಿಎಫ್ ಅಷ್ಟು ನೀರು ಸಂಗ್ರಹವಾಗಿದ್ದು ಕಳೆದ ವರ್ಷ ಉತ್ತಮ ಮಳೆಯಾದ ಹಿನ್ನೆಲೆಯಲ್ಲಿ ಅಪಾರ ಪ್ರಮಾಣದಲ್ಲಿ ನೀರು ಹರಿದು ಬಂದಿತ್ತು ಅಲ್ಲದೆ ಈ ವರ್ಷದ ಜನವರಿ 23ರವರೆಗು ಕೂಡ ಗೊರೂರಿನ ಹೇಮಾವತಿ ಜಲಾಶಯದಿಂದ ನೀರು ಹರಿಸಲಾಗಿತ್ತು.
ಹಾಸನ ಜಿಲ್ಲೆಯ ಗೋರೂರಿನಲ್ಲಿರುವ ಹೇಮಾವತಿ ಜಲಾಶಯದಿಂದ ತುಮಕೂರು ನಗರಕ್ಕೆ ಜೂನ್ 27ರಂದು ನಾಲೆಗಳ ಮೂಲಕ ನೀರನ್ನು ಹರಿಸಲಾಗಿತ್ತು. ಬುಗುಡನಹಳ್ಳಿ ಜಲ ಜಲಸಂಗ್ರಹಗಾರಕ್ಕೇ ತುಮಕೂರು ಬ್ರಾಂಚ್ ಕೆನಾಲ್ 124 ಕಿಲೋಮೀಟರ್ ವರೆಗೂ ಹೇಮಾವತಿ ನೀರು ಹರಿದು ಬಂದಿದೆ.
ಹೇಮಾವತಿ ನಾಲಾ ದುರಸ್ತಿ ಕಾಮಗಾರಿಯಿಂದಾಗಿ ಗೊರೂರು ಜಲಾಶಯದಿಂದ ನೀರು ಬಿಡಲು ವಿಳಂಬವಾಗಿತ್ತು. ಹಾಸನ ಜಿಲ್ಲಾ ಉಸ್ತುವಾರಿ ಸಚಿವರು ಆಗಿರುವ ಕೆ ಎನ್ ರಾಜಣ್ಣ ಹಾಗೂ ನೀರಾವರಿ ಸಲಹಾ ಸಮಿತಿ ಅಧ್ಯಕ್ಷರಾಗಿರುವ ಅವರು ಹೇಮಾವತಿ ಜಲಾಶಯದಿಂದ ಅಗತ್ಯದಷ್ಟು ನೀರನ್ನು ಹರಿಸುವಲ್ಲಿ ಸಫಲರಾಗಿದ್ದಾರೆ ಈ ಮೂಲಕ ತುಮಕೂರು ನಗರದಲ್ಲಿನ ಕುಡಿಯೋ ನೀರಿನ ಸಮಸ್ಯೆ ಬಹುತೇಕ ಪೂರ್ಣಗೊಂಡಿದೆ ಎಂದು ಶಾಸಕ ಜ್ಯೋತಿ ಗಣೇಶ್ ತಿಳಿಸಿದ್ದಾರೆ.
ಹಾಸನ ಜಿಲ್ಲೆ ಗೊರೂರಿನ ಹೇಮಾವತಿ ಜಲಾಶಯದಲ್ಲಿ ಪ್ರಸ್ತುತ 14.69 ಟಿಎಂಸಿ ನೀರು ಸಂಗ್ರಹವಾಗಿದ್ದು 4 ಟಿಎಂಸಿ ಡೆಡ್ ಸ್ಟೋರೇಜ್ ಇದೆ. ಹೀಗಾಗಿ 10 ಟಿಎಂಸಿ ನೀರನ್ನು ಮಾತ್ರ ಜಲಾಶಯದಿಂದ ಬಳಸಿಕೊಳ್ಳಬಹುದಾಗಿದೆ ಆದ್ದರಿಂದ ಐದು ದಿನಗಳು ಮಾತ್ರ ಬುಗುಡನಹಳ್ಳಿ ಜಲಸಂಗ್ರಹ ಕಾರಕ್ಕೆ ಹೇಮಾವತಿ ನೀರನ್ನು ಹರಿಸಲಾಗುತ್ತಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IHoly2pCaZPEkuV6RjAGNC
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA