ತುಮಕೂರು: ಇಬ್ಬರು ಪೊಲೀಸರು, ಇಬ್ಬರು ನಿರಾಶ್ರಿತ ಕೇಂದ್ರದ ಸಿಬ್ಬಂದಿ ಮೇಲೆ ದಾಳಿ ಉಗಂಡ ಪ್ರಜೆಗಳು ದಾಳಿ ನಡೆಸಿದ್ದು ಗಾಯಾಳುಗಳನ್ನು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ತುಮಕೂರು ನಗರದ ದಿಬ್ಬೂರಿನಲ್ಲಿ ವಿದೇಶಿ ಪ್ರಜೆಗಳ ನಿರಾಶ್ರಿತ ಕೇಂದ್ರವಿದ್ದು ಪಿಎಸ್ ಐ ಚಂದ್ರಕಲಾ, ಡಬ್ಲ್ಯೂ ಪಿಸಿ ತಾಸೀನಾ ಬಾನು ಮೇಲೆ ದಾಳಿ ಮಾಡಲಾಗಿದೆ.
ನಿರಾಶ್ರಿತ ಕೇಂದ್ರದ ಡ್ರೈವರ್ ಬಸವರಾಜು, ಅಡುಗೆ ಸಹಾಯಕಿ ಲಕ್ಷ್ಮೀ ಎಂಬುವರ ಮೇಲೆ ಗಂಭೀರವಾಗಿ ಹಲ್ಲೆ ಮಾಡಲಾಗಿದೆ. ಗ್ಯಾಸ್ ಸಿಲಿಂಡರ್ ನೀಡಲು ಹೋದಾಗ ಕೊಠಡಿಯಲ್ಲಿ ಕೂಡಿ ಹಾಕಿಕೊಂಡು ದಾಳಿ ಮಾಡಿದ್ದು ನಾಲ್ವರು ಮಹಿಳಾ ಉಗಾಂಡ ಪ್ರಜೆಗಳಿದ್ದರು. ಚಾಕು ಹಿಡಿದುಕೊಂಡು ಕೊಲೆ ಯತ್ನ.
ಸಂಜೆ 4.30ರ ಸಂದರ್ಭದಲ್ಲಿ ಘಟನೆ ನಡೆದಿದೆ. ಪಾಸ್ ಪೋರ್ಟ್ ಅವಧಿ ಮುಗಿದ ವಿದೇಶಿಗರ ನಿರಾಶ್ರಿತ ಕೇಂದ್ರವಾಗಿದ್ದು 30 ಜನರಿದ್ದಾರೆ, ಗಾಯಾಳುಗಳಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ನಾಲ್ವರಿಗೂ ಕಾಲು, ಕೈಗಳಿಗೆ ಗಾಯವಾಗಿದೆ. ತುಮಕೂರು ನಗರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿದ ಬಳಿಕ ಎಸ್ ಪಿ ರಾಹುಲ್ ಕುಮಾರ್ ಪತ್ರಕರ್ತರೊಂದಿಗೆ ಮಾತನಾಡಿ, ಕಳೆದ ಎರಡು ತಿಂಗಳಿಂದ ತುಮಕೂರಿನಲ್ಲಿ ವಿದೇಶಿ ಪ್ರಜೆಗಳ ನಿರಾಶ್ರಿತರ ಕೇಂದ್ರ ಓಪನ್ ಆಗಿದೆ. ಆ ಕೇಂದ್ರದಲ್ಲಿ ಒಟ್ಟು 27 ವಿದೇಶಿ ಮಹಿಳಾ ಪ್ರಜೆಗಳು ಇದ್ದಾರೆ. ಬೇರೆ ಬೇರೆ ಕಾರಣಗಳಿಂದ ಹಾಗೂ ವಿಸಾ ಮುಗಿದ ಹಿನ್ನೆಲೆ. ಅವರನ್ನ ಇಲ್ಲಿ ಕರೆತಂದು ಇರಿಸಲಾಗಿದೆ ಎಂದರು.
ಇವತ್ತು ಸಂಜೆ ಸ್ಟವ್ ಗಳನ್ನ ಬಳಸುತ್ತಿದ್ದಾರೆ ಎಂಬ ಮಾಹಿತಿ ಆಧಾರದ ಮೇಲೆ ಪರಿಶೀಲನೆ ನಡೆಸಲು, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಪೊಲೀಸ್ ಸಿಬ್ಬಂದಿ ಜೊತೆಗೆ ಇಲ್ಲಿಗೆ ಬಂದಿದ್ದಾರೆ. ಈ ವೇಳೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳನ್ನ ಅಟ್ಯಾಕ್ ಮಾಡಿದ್ದಾರೆ. ಜೊತೆಗೆ ನಮ್ಮ ಪೊಲೀಸ್ ಸಿಬ್ಬಂದಿಗಳಿಗೆ ಹಲ್ಲೆ ಮಾಡಿದ್ದಾರೆ ಎಂದರು.
ಗಾಯಾಳುಗಳನ್ನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗ್ತಿದೆ. ಈಗ ಯಾರು ಆರೋಪಿಗಳು ಇದ್ದಾರೆ ಅವನ್ನ ಅರೆಸ್ಟ್ ಮಾಡಿ. ಜೆಸಿಗೆ ಕಳುಹಿಸಲಾಗುತ್ತೆ. ನಾಲ್ಕು ಮಹಿಳಾ ಪೊಲೀಸ್ ಪೇದೆಗಳ ಮೇಲೆ ಹಾಗೂ ಒಬ್ಬರು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಮೇಲೆ ಹಲ್ಲೆ ಮಾಡಿದ್ದಾರೆ ಎಂದರು.
ಒಟ್ಟು ಇಲ್ಲಿ 27 ಜನ ವಿದೇಶಿ ಪ್ರಜೆಗಳು ಇದ್ದಾರೆ. ಅದರಲ್ಲಿ ನಾಲ್ಕು ಜನ ಮಾತ್ರ ಈ ರೀತಿಯಾಗಿ ವರ್ತನೆ ಮಾಡಿದ್ದಾರೆ. ಹಲ್ಲೆ ಮಾಡಿರುವ ವಿದೇಶಿ ಪ್ರಜೆಗಳು ಸದ್ಯಕ್ಕೆ ಯಾವ ದೇಶದವರು ಎಂಬ ಮಾಹಿತಿ ಇಲ್ಲ ಎಂದರು.
ದೂರು ದಾಖಲಿಸಿಕೊಂಡು ಪರಿಶೀಲನೆ ನಡೆಸುತ್ತೇವೆ. ನಿರಾಶ್ರಿತರ ಕೇಂದ್ರದಲ್ಲಿ ಬಾಂಗ್ಲಾದೇಶ, ನೈಜೀರಿಯ ಸೇರಿದಂತೆ ಒಟ್ಟು 5 ದೇಶದ ಪ್ರಜೆಗಳು ಇದ್ದಾರೆ ಎಂದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IHoly2pCaZPEkuV6RjAGNC
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA