ಕೊರಟಗೆರೆ: ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕು ಹೊಳವನಹಳ್ಳಿ ಹೋಬಳಿ ಬೈಚಾಪುರ ಗ್ರಾಪಂ ವ್ಯಾಪ್ತಿಯ ರೆಡ್ಡಿಹಳ್ಳಿಯ ಸಮೀಪದ ಗೋಮುಖ ಗೋಶಾಲೆಯಲ್ಲಿ ದುರ್ಘಟನೆ ನಡೆಯುತ್ತಿದೆ. ಮಧುಗಿರಿ ಪುರುವಾರ ಹೋಬಳಿ ಸುಣ್ಣವಾಡಿ ಗ್ರಾಮದ ಸರ್ವೇ.೧೫ರ ಸರಕಾರಿ ಗೋಮಾಳದ ಜಮೀನಿನಲ್ಲಿ ದಾರಿಯಿದೆ. ಕೊರಟಗೆರೆ ತಾಲೂಕಿನ ರೆಡ್ಡಿಯಲ್ಲಿ ಗ್ರಾಮದ ಸರ್ವೇ ನಂ.೪೩/೮ರ ೧ಎಕರೇ ೩೧ಗುಂಟೆ ಜಮೀನಿನಲ್ಲಿ ಗೋಮುಖ ಗೋಶಾಲೆ ಇದೆ.
ಗೋಮುಖ ಗೋಶಾಲೆಯು ೨೦೨೩ರ ಮಾ.೯ರಂದು ಪ್ರಾರಂಭ ಆಗಿದೆ. ಗೋಶಾಲೆಯಲ್ಲಿ ಪ್ರಸ್ತುತ ಒಟ್ಟು ೩೫ಎಮ್ಮೆ ಮತ್ತು ೧೪ಹಸು ಸೇರಿ ಒಟ್ಟು ೪೯ರಾಸುಗಳಿವೆ. ಪಾವಗಡ, ಮಧುಗಿರಿ, ಮಡಕಶಿರಾದ ಪೊಲೀಸ್ ಇಲಾಖೆಯಿಂದ ಚಿನ್ನಮಲ್ಲಣ್ಣಹಳ್ಳಿಯ ಸುರಭಿ ಗೋಶಾಲೆ ಮೂಲಕ ರೆಡ್ಡಿಯಲ್ಲಿಯ ಗೋಮುಖ ಗೋಶಾಲೆಗೆ ಹಸ್ತಾಂತರ ಆಗಿವೆ. ಗೋಶಾಲೆಗೆ ಪರವಾಗಿ ನೀಡಬೇಕಾದ ವೇಳೆ ಅಧಿಕಾರಿಗಳ ತಂಡ ಸ್ಥಳ ಪರಿಶೀಲನೆ ನಡೆಸದ ಪರಿಣಾಮ ಸಮಸ್ಯೆಯು ದ್ವೀಗುಣವಾಗಲು ಕಾರಣವಾಗಿದೆ.
ದೂರು ನೀಡಿದ್ರು ಪ್ರಯೋಜನಾ ಆಗಿಲ್ಲ:
ತುಮಕೂರು ಜಿಲ್ಲಾಧಿಕಾರಿ, ಪೊಲೀಸ್ ಉಪಅಧೀಕ್ಷರ ಕಚೇರಿ, ಮಧುಗಿರಿ ಕಂದಾಯ ಮತ್ತು ಕೊರಟಗೆರೆ ಪೊಲೀಸ್ ಠಾಣೆಗೆ ಜು.೧ರಂದು ಶನಿವಾರವೇ ಗೋಮುಖ ಗೋಶಾಲೆಯ ಟ್ರಸ್ಟ್ ಅಧ್ಯಕ್ಷ ಮಲ್ಲಿಕಾರ್ಜುನ್ ದಾರಿಯ ಸಮಸ್ಯೆಯ ವಿಚಾರಕ್ಕೆ ತುರ್ತುಕ್ರಮಕ್ಕೆ ದೂರು ನೀಡಿದ್ದಾರೆ. ಜು.೬ರಂದು ಮಧುಗಿರಿ ಕಂದಾಯ ಇಲಾಖೆ ಅಧಿಕಾರಿಗಳ ತಂಡ ಮತ್ತು ಕೊರಟಗೆರೆ ತಹಶೀಲ್ದಾರ್ ಬೇಟಿನೀಡಿ ಸ್ಥಳ ಪರಿಶೀಲನೆ ನಡೆಸಿದ್ರು ಕೂಡು ದಾರಿಯ ಸಮಸ್ಯೆಯು ಹಾಗೆಯೇ ಉಳಿದು ರಾಸುಗಳಿಗೆ ಕಂಟಕ ಎದುರಾಗಿದೆ.
೨೦ಕ್ಕೂ ಅಧಿಕ ರಾಸುಗಳ ದಾರುಣ ಸಾವು:
ಸಮರ್ಪಕ ಪೋಷಣೆ ಮತ್ತು ನಿರ್ವಹಣೆ ಇಲ್ಲದೇ ಅನಾರೋಗ್ಯ ಹೆಚ್ಚಾಗಿ ಕಳೆದ ೩೦ದಿನದಿಂದ ೧೨ರಾಸುಗಳ ಮೃತಪಟ್ಟಿವೆ. ಕಳೆದ ವಾರದಿಂದ ಗೋಶಾಲೆಗೆ ಆಗಮಿಸಲು ದಾರಿಯಿಲ್ಲದೇ ಮೇವು-ನೀರು ಕೊರತೆಯಿಂದ ೮ರಾಸುಗಳು ದಾರುಣವಾಗಿ ದೊಡ್ಡಿಯಲ್ಲಿಯೇ ಸತ್ತಿವೆ. ಇದಲ್ಲದೇ ಗೋಮುಖ ಗೋಶಾಲೆಯ ಸುತ್ತಲು ಸ್ಥಳೀಯರು ಚರಂಡಿ ತೆಗೆದು ರಾಸುಗಳಿಗೆ ದಿಗ್ಭಂಧನ ಹಾಕಲಾಗಿದೆ. ಸಂಬAಧಪಟ್ಟ ಅಧಿಕಾರಿಗಳ ತಂಡ ಸ್ಥಳಕ್ಕೆ ಬೇಟಿನೀಡಿ ಗಡಿರೇಖೆಯ ದಾರಿಗೆ ತುರ್ತಾಗಿ ಪರಿಹಾರ ನೀಡಿ ರಾಸುಗಳ ಸಾವು ತಡೆಯಬೇಕಿದೆ.
ರೆಡ್ಡಿಹಳ್ಳಿ ಗ್ರಾಮದ ರೈತ ವೆಂಕಟೇಶಯ್ಯ ಮಾತನಾಡಿ ದಲಿತ ರೈತರಿಗೆ ಅರ್ಧಹಣ ನೀಡಿ ಖಾಲಿ ಚೇಕ್ ನೀಡಿ ಮೋಸಮಾಡಿ ಜಮೀನು ಪಡೆದಿದ್ದಾರೆ. ರೆಡ್ಡಿಯಲ್ಲಿ ಕೆರೆಯಲ್ಲಿ ೨೦ಕ್ಕೂ ರಾಸುಗಳ ಮೃತದೇಹ ತೇಲುತ್ತಿದೆ. ಪ್ರತಿನಿತ್ಯವು ಐದಾರು ರಾಸುಗಳು ಕಾರಣವೇ ಇಲ್ಲದೇ ಸಾಯುತ್ತಿವೆ. ನಮ್ಮ ಮುತ್ತಾತ ಕಾಲದಿಂದ ಉಳುಮೆ ಮಾಡಿಕೊಂಡು ಬಂದ ಜಮೀನು ನಮ್ಮದು. ನಾನು ಉಳುಮೆ ಮಾಡುತ್ತಿರುವ ಜಮೀನಿಗೆ ಬೌಂಡರಿ ಮಾಡಿಸಿದ್ದು ಸತ್ಯ. ಈ ಗೋಶಾಲೆ ನಮ್ಮೂರಿಗೆ ಅಗತ್ಯವಿಲ್ಲ ಎಂದರು.
ಗೋಮುಖ ಗೋಶಾಲೆ ಟ್ರಸ್ಟ್ ಅಧ್ಯಕ್ಷ ಮಲ್ಲಿಕಾರ್ಜುನ್ ಮಾತನಾಡಿ ಗೋಮಾಳದ ಜಮೀನಿನ ದಾರಿ ಮುಚ್ಚಿದ ಪರಿಣಾಮ ಗೋಶಾಲೆಯ ರಾಸುಗಳಿಗೆ ¸ ವಾರದಿಂದ ಮೇವು ಮತ್ತು ನೀರು ಪೂರೈಸಲು ಆಗುತ್ತಿಲ್ಲ. ಗೋಮಾಳದ ಜಮೀನಿನ ರಸ್ತೆಗೆ ಹಣ ನೀಡಿದ್ರೇ ದಾರಿ ಬಿಡ್ತಾರಂತೆ. ಜಿಲ್ಲಾಧಿಕಾರಿ ಮತ್ತು ಮಧುಗಿರಿ ತಹಶೀಲ್ದಾರ್‌ಗೆ ದೂರು ನೀಡಿದ್ರು ಪ್ರಯೋಜನಾ ಆಗಿಲ್ಲ. ಮೇವು ಮತ್ತು ನೀರು ಸರಬರಾಜು ಇಲ್ಲದೇ ಪ್ರತಿನಿತ್ಯ ರಾಸುಗಳು ಸಾಯುತ್ತಿವೆ. ದಯವಿಟ್ಟು ಸಮಸ್ಯೆ ಸರಿಪಡಿಸಿ ಕೋಡಬೇಕಿದೆ ಎಂದು ಮನವಿ ಮಾಡಿದರು.
ಕೊರಟಗೆರೆ ತಹಶೀಲ್ದಾರ್ ಮುನಿಶಾಮಿರೆಡ್ಡಿ ಮಾತನಾಡಿ ಗೋಶಾಲೆಗೆ ಮೇವು ಮತ್ತು ನೀರು ಪೂರೈಕೆಗೆ ಅಗತ್ಯ ಕ್ರಮಕ್ಕೆ ಸೂಚಿಸಲಾಗಿದೆ. ಸರಕಾರಿ ಗೋಮಾಳದ ರಸ್ತೆ ಕಡಿತ ಮಾಡದಂತೆ ರೆಡ್ಡಿಯ ರೈತನಿಗೆ ಎಚ್ಚರಿಕೆ ನೀಡಲಾಗಿದೆ. ಗೋಶಾಲೆಯ ರಾಸುಗಳಿಗೆ ಹೆಚ್ಚಿನ ಚಿಕಿತ್ಸೆಗೆ ನೀಡುವಂತೆ ಪಶು ವೈದ್ಯರಿಗೆ ತಿಳಿಸಲಾಗಿದೆ. ರಾಸುಗಳ ರಕ್ಷಣೆ ಮತ್ತು ಪೋಷಣೆಯ ಬಗ್ಗೆ ಮಾಹಿತಿ ನೀಡುವಂತೆ ಈಗಾಗಲೇ ಟ್ರಸ್ಟ್ ಅಧ್ಯಕ್ಷರಿಗೆ ಸೂಚಿಸಿದ್ದೇನೆ ಎಂದರು.
ಗೋಮುಖ ಗೋಶಾಲೆಯ ಅಧ್ಯಕ್ಷ ಮಲ್ಲಿಕಾರ್ಜುನ್ ಮತ್ತು ರೆಡ್ಡಿಯ ರೈತ ವೆಂಕಟೇಶಯ್ಯ ನಡುವಿನ ಸರಕಾರಿ ಗೋಮಾಳದ ದಾರಿಯ ಪ್ರತಿಷ್ಠೆಯ ತಿಕ್ಕಾಟದಿಂದ ರಾಸುಗಳಿಗೆ ಕಂಟಕ ಎದುರಾಗಿದೆ. ತುರ್ತು ಸಮಸ್ಯೆಯನ್ನ ಅರಿತು ಕ್ರಮ ಕೈಗೊಳ್ಳಬೇಕಾದ ಅಧಿಕಾರಿಗಳ ತಂಡವು ಮೌನಕ್ಕೆ ಶರಣಾದ ಪರಿಣಾಮವೇ ರಾಸುಗಳ ಸಾವು ಹೆಚ್ಚಾಗಲು ಕಾರಣವಾಗಿದೆ. ತುಮಕೂರು ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿ ಸ್ಥಳಕ್ಕೆ ಬೇಟಿನೀಡಿ ತಕ್ಷಣ ತುರ್ತುಕ್ರಮ ಕೈಗೊಳ್ಳಬೇಕಿದೆ.
ವರದಿ: ಮಂಜುಸ್ವಾಮಿ ಎಂ.ಎನ್., ಕೊರಟಗೆರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IHoly2pCaZPEkuV6RjAGNC
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA