ತುಮಕೂರು: ರಸ್ತೆ ಬದಿಯಲ್ಲಿ ಕೊರೆಯಲಾಗಿದ್ದ ಹೊಂಡಕ್ಕೆ ಕಾರೊಂದು ಬಿದ್ದ ಘಟನೆ ತುಮಕೂರಿನ NH 4 ಪೂನಾ — ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು ನಡೆದಿದೆ.
ಪೂನಾ — ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ ಸುಮಾರು 6ರಿಂದ 8 ಅಡಿ ಉದ್ದದ ಗುಂಡಿಯನ್ನು ತೆಗೆದು ಹಾಗೆಯೇ ಬಿಡಲಾಗಿದ್ದು, ಈ ಗುಂಡಿಗೆ ಕಾರು ಬಿದ್ದು ಮಗುಚಿ ಬಿದ್ದಿದೆ.
ಅಂತರಸನಹಳ್ಳಿ ಬೈಪಾಸ್ ಬಳಿಯಲ್ಲೇ ಈ ಘಟನೆ ನಡೆದಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದ ಎಲ್ಲರೂ ಕೂಡ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸಾರ್ವಜನಿಕರಿಂದ ಆಕ್ರೋಶ:
ಪೂನಾ — ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಅಂತರಸನಹಳ್ಳಿ ಬೈಪಾಸ್ ಬಳಿಯಲ್ಲಿ ರಸ್ತೆಯ ಎಡಬಾಗದಲ್ಲಿ ಸುಮಾರು 6 ರಿಂದ 8 ಅಡಿ ಉದ್ದ ಗುಂಡಿ ತೆಗೆದು ಹಾಗೆ ಬಿಟ್ಟಿರುತ್ತಾರೆ ಇಂತ ಅಪಘಾತಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೇಬಲ್ ಅಳವಡಿಕೆ ಹಾಗೂ ಮತ್ತಿತರ ಕಾಮಕಾರಿ ನಡೆಸುವವರು ರಸ್ತೆ ಬದಿಯಲ್ಲಿ ಗುಂಡಿ ತೋಡಿಟ್ಟು ಸಾರ್ವಜನಿಕರಿಗೆ ಅಪಾಯವನ್ನುಂಟು ಮಾಡುತ್ತಿದ್ದಾರೆ. ಈ ಒಂದು ಪ್ರದೇಶ ಮಾತ್ರವಲ್ಲದೇ ಹಲವು ಪ್ರದೇಶಗಳಲ್ಲಿ ಈ ರೀತಿಯ ಗುಂಡಿಗಳನ್ನು ತೋಡಿ ಹಾಗೆಯೇ ಬಿಟ್ಟಿದ್ದಾರೆ. ಇದಕ್ಕೆ ಯಾರಾದರೂ ಬಿದ್ದು ಜೀವ ಹಾನಿಯಾದರೆ ಯಾರು ಜವಾಬ್ದಾರರು? ಎಂದು ಜನ ಪ್ರಶ್ನಿಸುತ್ತಿದ್ದಾರೆ.
ವಿಡಿಯೋ ನೋಡಿ:
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/EAp8zUqF6y43cTFbQE5jEU