ವರದಿ: ಸುರೇಶ್ ಬಾಬು ಎಂ. ತುರುವೇಕೆರೆ
ತುರುವೇಕೆರೆ: ನನ್ನ ಅವಧಿಯಲ್ಲಿ ಬಂದಂತಹ ಶಾಸಕರ ಪ್ರದೇಶಾಭಿವೃದ್ದಿ ಅನುದಾನ 3 ಕೋಟಿ ಅದರಲ್ಲಿನ ಕಾಮಗಾರಿಗಳ ಎಸ್ಟಿಮೆಂಟ್ ಗಳನ್ನು ಇದರಲ್ಲಿರುವ ಎಂಜಿನಿಯರ್ ಗಳು ಅದನ್ನು ಬದಲಾಯಿಸಿದ್ದಾರೆ. ಸುಮಾರು 100 ಹಳ್ಳಿಗಳಿಗೆ ಅನುದಾನವನ್ನು ಹಂಚಿಕೆ ಮಾಡಿದ್ದೆವು. ಅದನ್ನು ಬದಲಾಯಿಸಿ ಕಾಮಗಾರಿಗಳನ್ನು ಕೈಗೊಂಡಿದ್ದಾರೆ ಎಂದು ಮಾಜಿ ಶಾಸಕ ಮಸಾಲಾ ಜಯರಾಮ್ ನೇರ ಆರೋಪ ಮಾಡಿದರು.
ತಮ್ಮ ಫಾರ್ಮ್ ಹೌಸ್ ನಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮಜಿಲ್ಲೆಯಲ್ಲಿ ಅತಿ ಹೆಚ್ಚು ಕೊಬ್ಬರಿ ಮತ್ತು ಅಡಿಕೆಯನ್ನು ಬೆಳೆಯುತ್ತೇವೆ . ನಮ್ಮ ಸರ್ಕಾರದ ಅವಧಿಯಲ್ಲಿ ನಫೆಡ್ ತೆರೆದಿದ್ದೆವು ಈಗಿನ ಸರ್ಕಾರದಲ್ಲೂ ಸಹ ನಫೆಡ್ ಖರೀಧಿಕೇಂದ್ರಗಳಲ್ಲಿ ಅವುಗಳನ್ನು ಸರ್ಕಾರದಿಂದ ಖರೀದಿ ಮಾಡುತ್ತಿದೆ . ಕೇಂದ್ರ ಸರ್ಕಾರ ಬೆಂಬಲಬೆಲೆ 11,750|- ರೂಗಳನ್ನು ನೀಡಿ ನಿಗದಿ ಮಾಡಿದೆ ಆದರೆ ರಾಜ್ಯಸರ್ಕಾರ ಪ್ರೋತ್ಸಾಹ ಧನವನ್ನುಕೊಡುತ್ತಿಲ್ಲ . ರಾಜ್ಯ ಸರ್ಕಾರಕ್ಕೆ ರೈತರ ಪರವಾಗಿ ಮನವಿ ಮಾಡುತ್ತೇನೆ, ದಯವಿಟ್ಟು ನಫೆಡ್ ಖರೀದಿ ಕೇಂದ್ರಗಳನ್ನು ಇನ್ನು 2 ರಿಂದ 3 ತಿಂಗಳು ಮುಂದುವರೆಸಿ ನಮ್ಮ ರೈತರಿಗೆ 15 ಸಾವಿರ ಪ್ರೋತ್ಸಾಹ ಧನ ನೀಡಬೇಕೆಂದು ನಾನು ಸರ್ಕಾರವನ್ನು ಒತ್ತಾಯಿಸುತ್ತೇನೆ ಎಂದರು.
ನನ್ನ ಅವಧಿಯಲ್ಲಿ ಬಂದಂತಹ ಶಾಸಕರ ಅನುದಾನ 3 ಕೋಟಿ ಅದರಲ್ಲಿನ ಕಾಮಗಾರಿಗಳ ಎಸ್ಟಿಮೆಂಟ್ ಗಳನ್ನು ಇಲ್ಲಿರುವ ಎಂಜಿನಿಯರ್ ಗಳು ಅದನ್ನು ಬದಲಾಯಿಸಿದ್ದಾರೆ. ಸುಮಾರು 100 ಹಳ್ಳಿಗಳಿಗೆ ಅನುದಾನವನ್ನು ಹಂಚಿಕೆ ಮಾಡಿದ್ದೆವು. ಅದನ್ನು ಬದಲಾಯಿಸಿ ಕಾಮಗಾರಿಗಳನ್ನು ಕೈಗೊಂಡಿದ್ದಾರೆ, ಆದ್ದರಿಂದ ಇಲ್ಲಿರುವ ಅಧಿಕಾರಿಗಳಿಗೆ ಮತ್ತು ಎಂಜಿನಿಯರ್ ಗಳಿಗೆ ಹಾಗೇನಾದರೂ ಮಾಡಿದಲ್ಲಿ ನನ್ನ ಕಾರ್ಯಕರ್ತರ ಜೊತೆಯಲ್ಲಿ ಬಂದು ನಿಮ್ಮ ಕಚೇರಿಗೆ ನಿಮ್ಮನ್ನು ಕೂಡಿಹಾಕಿ ಬೀಗ ಹಾಕಿ ಪ್ರತಿಭಟನೆ ಮಾಡುತ್ತೇವೆ ಹಾಗೂ ಸಸ್ಪೆಂಡ್ ಮಾಡುವವರೆಗೂ ಬಿಡುವುದಿಲ್ಲ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಜಿಲ್ಲಾ ಪಂಚಾಯ್ತಿ ಮತ್ತು ತಾಲ್ಲೂಕು ಪಂಚಾಯತಿ ಚುನಾವಣೆಗೆ ಸರ್ಕಾರ ಮೀಸಲಾತಿ ಪ್ರಕಟಣೆಯನ್ನು ಹೊರಡಿಸಿದ ಮೇಲೆ ನಾವು ನಮ್ಮ ಪಕ್ಷದಿಂದ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತೇವೆ ಎಂದು ಇದೇ ವೇಳೆ ತಿಳಿಸಿದ ಅವರು, ಜೆ.ಡಿ.ಎಸ್. ಜೊತೆ ಹೊಂದಾಣಿಕೆ ವರಿಷ್ಠರಿಗೆ ಬಿಟ್ಟ ವಿಚಾರ, ಸಂಸತ್ ಚುನಾವಣೆಗೆ ಯಾರೇ ಅಭ್ಯರ್ಥಿ ಆದರೂ ಸಹ ಅವರಿಗೆ ನನ್ನ ಬೆಂಬಲವಿದೆ. ಯಾವುದೇ ಕಾರಣಕ್ಕೂ ಮಾಧುಸ್ವಾಮಿಯವರು ಪಕ್ಷವನ್ನು ತೊರೆಯುವುದಿಲ್ಲ, ಪಕ್ಷದ ಋಣ ನನ್ನ ಮೇಲಿದೆ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ. ಹೈಕಮಾಂಡ್ ನನಗೆ ಟಿಕೆಟ್ ನೀಡಿದರೆ ನಾನೂ ಕೂಡ ಸ್ಪರ್ಧೆ ಮಾಡುತ್ತೇನೆ ಎಂದು ಅಕಾಡಕ್ಕೆ ಇಳಿಯುವ ಸೂಚನೆಯನ್ನು ನೀಡಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಬಿ.ಜೆ.ಪಿ ಅಧ್ಯಕ್ಷ ಮೃತ್ಯುಂಜಯ, ಮುಖಂಡರಾದ ಕೊಂಡಜ್ಜಿ ವಿಶ್ವನಾಥ್, ಕಡೆಹಳ್ಳಿ ಸಿದ್ದೇಗೌಡ, ಕಾರ್ಯದರ್ಶಿ ಪ್ರಕಾಶ್, ಮಹಿಳಾಮೋರ್ಚಾದ ಚೂಡಾಮಣಿ, ಬಿಗನೇಹಳ್ಳಿ ರವಿ. ರಾಧ ಮತ್ತಿತರಿದ್ದರು.
ವಿಡಿಯೋ ನೋಡಿ:
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy