ತುಮಕೂರು: ಹೆತ್ತ ತಾಯಿಯೇ ನನ್ನ ಆರು ವರ್ಷದ ಮಗಳನ್ನ ಕೊಲೆ ಮಾಡಿರುವ ಭಯಾನಕ ಘಟನೆ ತುಮಕೂರಿನ ಶಾಂತಿ ನಗರದಲ್ಲಿ ನಡೆದಿದೆ.
ತುಮಕೂರಿನ ಶಾಂತಿನಗರದಲ್ಲಿ ವಾಸವಾಗಿರುವ ಹೇಮಲತಾ ಎಂಬಾಕೆಯೇ ಕೊಲೆ ಮಾಡಿದ ದುಷ್ಟ ತಾಯಿ, ಆಕೆ ತನ್ನ ಆರು ವರ್ಷದ ಮಗಳು ತನ್ವಿತಾಳನ್ನು ಭೀಕರವಾಗಿ ಕೊಲೆ ಮಾಡಿದ್ದಾಳೆ.
ಶುಕ್ರವಾರ ಮನೆಯಲ್ಲಿದ್ದ ವೇಳೆ ಒಮ್ಮಿಂದೊಮ್ಮೆಗೆ ರೊಚ್ಚಿಗೆದ್ದ ಹೇಮಲತಾ ಮಗಳನ್ನು ಕೊರಳು ಕಟ್ಟಿಸಿ ಕೊಂದು ಹಾಕಿದ್ದಾಳೆ. ಮಗುವಿನ ಆರ್ತನಾದವನ್ನು ಕೇಳಿ ಅಕ್ಕಪಕ್ಕದವರು ಓಡಿ ಬಂದು ಆಕೆಯ ಕೈಯಿಂದ ಮಗುವನ್ನು ಬಿಡಿಸಿದಾಗ ತನ್ವಿತಾ ಪ್ರಾಣವನ್ನೇ ಕಳೆದುಕೊಂಡಿದ್ದಳು.
ತಾಯಿ ಹೇಮಲತಾಗೆ ಮಾನಸಿಕ ಅಸ್ವಸ್ಥತೆ ಇದೆ ಎಂದು ಹೇಳಲಾಗುತ್ತಿದೆ. ಆದರೆ, ಇದು ಕೊಲ್ಲುವಷ್ಟರ ಮಟ್ಟಿಗೆ ಏರಿದ್ದು ಹೇಗೆ? ಇಷ್ಟೆಲ್ಲ ಜೋರಾದ ಅಸ್ವಸ್ಥತೆ ಇದ್ದರೆ ಆಕೆಯ ಜತೆ ಈ ಪುಟ್ಟ ಮಗಳನ್ನು ಬಿಟ್ಟು ಹೋಗಿದ್ದು ಯಾಕೆ ಎಂಬೆಲ್ಲ ಪ್ರಶ್ನೆಗಳು ಹುಟ್ಟಿಕೊಂಡಿವೆ.
ತುಮಕೂರಿನ ಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತಾಯಿ ಹೇಮಲತಾಳನ್ನು ಬಂಧಿಸಲಾಗಿದೆ. ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IHoly2pCaZPEkuV6RjAGNC
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA