ತುಮಕೂರು: ಬಸ್ಸಿನಲ್ಲಿ ಮಹಿಳೆಯರ ಹೊಡೆದಾಟ ಘಟನೆಯ ಬಗ್ಗೆ ಇದೀಗ ಮತ್ತಷ್ಟು ಮಾಹಿತಿಗಳು ಲಭ್ಯವಾಗಿದೆ. ಬೆಂಗಳೂರಿನಿಂದ ಬೆಳಗಾವಿಗೆ ಹೊರಟಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ ತುಮಕೂರು ಬಸ್ ನಿಲ್ದಾಣ ತಲುಪುತ್ತಿದ್ದಂತೆ ಮಹಿಳೆಯರಿಬ್ಬರು ಸಿಟಿಗಾಗಿ ಪರಸ್ಪರ ಕಿತ್ತಾಡಿಕೊಂಡಿದ್ದಾರೆ.
ಮಹಿಳೆ ಒಬ್ಬರು ತುಮಕೂರು ಬಸ್ ನಿಲ್ದಾಣದಿಂದ ಬೆಳಗಾವಿಗೆ ಸೀಟನ್ನು ಕಾಯ್ದಿರಿಸಿದ್ದರು. ಆ ಸೀಟಿನಲ್ಲಿ ಬೆಂಗಳೂರಿನಿಂದ ಬಂದಂತಹ ಮಹಿಳೆಯೊಬ್ಬರು ಕುಳಿತಿದ್ದರು ಅದನ್ನು ಬಿಟ್ಟು ಕೊಡುವಂತೆ ಕೇಳಿದರೂ ಬಿಟ್ಟು ಕೊಟ್ಟಿಲ್ಲ. ಇದರಿಂದ ಇಬ್ಬರ ನಡುವೆ ಮಾತಿಗೆ ಮಾತು ನಡೆದು ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದೆ.
ಒಂದು ಹಂತದಲ್ಲಿ ಇಬ್ಬರೂ ತಲೆ ಕೂದಲನ್ನು ಹಿಡಿದುಕೊಂಡು ಕಿತ್ತಾಡಿಕೊಂಡಿದ್ದಾರೆ. ಬಸ್ ನಲ್ಲಿದ್ದ ಪ್ರಯಾಣಿಕರೊಬ್ಬರು ಹಾಗೂ ಚಾಲಕ ಇವರಿಬ್ಬರ ಜಗಳವನ್ನು ಬಿಡಿಸಲು ಎಷ್ಟೇ ಪ್ರಯತ್ನ ಪಟ್ಟರು ಸಾಧ್ಯವಾಗಲಿಲ್ಲ. ಬದಲಾಗಿ ಜಗಳ ಬಿಡಿಸಲು ಹೋದ ವ್ಯಕ್ತಿಗೆ ನೀನ್ಯಾವನೋ ಕೇಳಲು ಬೇವ*** ಎಂದು ಅವಾಚ್ಯ ಶಬ್ದಗಳಿಂದ ಮಹಿಳೆ ಬೈದಿದ್ದು, ಮತ್ತೆ ತನ್ನ ರೌದ್ರಾವತಾರ ತೋರಿದ್ದಾಳೆ.
ಮಹಿಳೆಯರ ಜಗಳ ನಿಲ್ಲದ ಹಿನ್ನೆಲೆಯಲ್ಲಿ ಬೇಸತ್ತ ಬಸ್ ನ ಚಾಲಕ ನೇರವಾಗಿ ಬಸ್ ಅನ್ನು ಚಾಲನೆ ಮಾಡಿಕೊಂಡು ತುಮಕೂರು ನಗರ ಪೊಲೀಸ್ ಠಾಣೆಗೆ ಹೋಗಿದ್ದಾರೆ.
ಪೊಲೀಸ್ ಠಾಣೆ ಬಳಿ ಬಸ್ ಸಾಗುತ್ತಿದ್ದಂತೆ ನಿಧಾನವಾಗಿ ಸೀಟು ಕಾಯ್ದಿರಿಸಿದ್ದೆ ಎಂದು ಜಗಳ ಮಾಡುತ್ತಿದ್ದ ಮಹಿಳೆ ಬಸ್ಸಿಂದ ಇಳಿದು ಸ್ಥಳದಿಂದ ಪರಾರಿಯಾಗಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IHoly2pCaZPEkuV6RjAGNC
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA