ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ರಾಜ್ಯದ ಜನರು ತತ್ತರಿಸಿ ಹೋಗಿದ್ದಾರೆ. ತರಕಾರಿ ಬೆಲೆ ಗಗನಕ್ಕೇರಿದೆ. ಟೊಮೆಟೋ ದರ 100ರೂ ಗಡಿದಾಟಿದೆ. ಹೀಗಿರುವಾಗ, ರಾಜ್ಯದ ಜನತೆಗೆ ಮತ್ತೊಂದು ಶಾಕ್ ಎನ್ನುವಂತೆ ನಂದಿನಿ ಹಾಲಿನ ದರ ಪ್ರತಿ ಲೀಟರ್ ಗೆ ರೂ. 3 ಹೆಚ್ಚಳ ಮಾಡಲಾಗಿದೆ.
ಅಗಸ್ಟ್ 1 ಅಂದರೆ ನಾಳೆಯಿಂದಲೇ ನೂತನ ದರ ಜಾರಿಗೆ ಬರಲಿದೆ. ಯಾವ ಹಾಲಿನ ದರ ಬೆಲೆ ಎಷ್ಟೆಷ್ಟು ಹೆಚ್ಚಳ ಎನ್ನುವುದನ್ನು ನೋಡುವುದಾದ್ರೆ ಅದರ ಮಾಹಿತಿ ಇಲ್ಲಿದೆ.
1. ನಂದಿನಿ( ಟೋನ್ಸ್ ಹಾಲು) ಅರ್ಧ ಲೀಟರ್ ಗೆ 23 ಹಾಗೂ ಒಂದು ಲೀಟರ್ ಗೆ 43 ರೂ. ಆಗಲಿದೆ.
2. ನಂದಿನಿ (ಡಬಲ್ ಟೋನ್ಸ್ ಹಾಲು) ಅರ್ಧ ಲೀಟರ್ ಗೆ 22 ಹಾಗೂ ಒಂದು ಲೀಟರ್ ಗೆ 41 ರೂಪಾಯಿ ಆಗಲಿದೆ.
3. ನಂದಿನಿ ಶುಭಂ ಅರ್ಧ ಲೀಟರ್ ಗೆ 25 ಹಾಗೂ ಒಂದು ಲೀಟರ್ ಗೆ 48 ರೂ. ಆಗಲಿದೆ.
4. ನಂದಿನಿ ಸ್ಪೆಷಲ್ ಅರ್ಧ ಲೀಟರ್ ಗೆ 26 ಮತ್ತು ಒಂದು ಲೀಟರ್ ಗೆ 48 ರೂ. ಆಗಲಿದೆ.
5. ನಂದಿನಿ ( ಸಮೃದ್ಧಿ) ಅರ್ಧ ಲೀಟರ್ ಗೆ 27 ಹಾಗೂ ಒಂದು ಲೀಟರ್ ಗೆ 51 ರೂಪಾಯಿ ಆಗಲಿದೆ.
6. ನಂದಿನಿ ಹಸುವಿನ ಹಾಲು ಅರ್ಧ ಲೀಟರ್ ಗೆ 25 ಹಾಗೂ ಒಂದು ಲೀಟರ್‌ಗೆ 54 ರೂಪಾಯಿ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/EAp8zUqF6y43cTFbQE5jEU
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA