ರಸ್ತೆಯ ವಿಭಜಕಕ್ಕೆ ಡಿಕ್ಕಿ ಹೊಡೆದ ಪರಿಣಾಮ ಖಾಸಗಿ ಭದ್ರತಾ ಅಧಿಕಾರಿಯೊಬ್ಬರು ಮೃತಪಟ್ಟಿದ್ದಾರೆ. ಜಾರ್ಖಂಡ್ ರಾಜ್ಯದ ಜೆಮ್ಮೆಡ್ ನಗರದ ಆದಿತ್ಯ ಲೂಕ್ ಕುಜುರ್ (27) ಮೃತಪಟ್ಟವರು. ಇವರು 4-ಬಿ ಕಂಪನಿಯಲ್ಲಿ ಭದ್ರತಾ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದರು.
ಸೋಮವಾರ ರಾತ್ರಿ ಜೆ. ಬಿ. ನಗರದ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಇಂದಿರಾ ನಗರದ 100 ಅಡಿ ರಸ್ತೆಯ ಮಂಗೋಲಿಯಾ ಬೇಕರಿ ಬಳಿ ಅಪಘಾತ ಸಂಭವಿಸಿದೆ.
‘ಕಂಪನಿಯಲ್ಲಿ ಕೆಲಸ ಮುಗಿಸಿಕೊಂಡು ರಾತ್ರಿ 12. 30ರ ವೇಳೆಯಲ್ಲಿ ತಮ್ಮ ಬಿಎಂಡಬ್ಲ್ಯು ಬೈಕ್ ನಲ್ಲಿ ಹೆಲ್ಮಟ್ ಧರಿಸದೆ ವೇಗವಾಗಿ ತೆರಳುತ್ತಿದ್ದರು. ಬೇಕರಿ ಸಮೀಪ ರಸ್ತೆಯ ಮಧ್ಯದ ಸಿಮೆಂಟ್ ವಿಭಜಕಕ್ಕೆ ಡಿಕ್ಕಿ ಹೊಡೆದಿದ್ದರು. ಹೆಲ್ಮಟ್ ಧರಿಸದಿರುವ ಕಾರಣಕ್ಕೆ ತಲೆಗೆ ತೀವ್ರವಾದ ಪೆಟ್ಟು ಬಿದ್ದಿತ್ತು. ಸಿಎಂಎಚ್ ಆಸ್ಪತ್ರೆ ಕರೆದೊಯ್ಯುವ ಮಾರ್ಗ ಮಧ್ಯದಲ್ಲಿ ಅವರು ಮೃತಪಟ್ಟಿದ್ದರು’ ಎಂದು ಸಂಚಾರ ಪೂರ್ವ ವಿಭಾಗದ ಪೊಲೀಸರು ತಿಳಿಸಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IHoly2pCaZPEkuV6RjAGNC
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA


