ಓರ್ವ ವ್ಯಕ್ತಿ ಸರಾಸರಿ ವಿದ್ಯುತ್ ಬಳಕೆ 199 ಯೂನಿಟ್ ಇದ್ದು, ಈ ಬಾರಿ 203 ಯುನಿಟ್ ಬಳಸಿದ್ರೆ ಯೋಜನೆ ಲಾಭ ಇಲ್ಲ. ಸರಾಸರಿ ಬಳಕೆ ಮೇಲೆ 10% ಹೆಚ್ಚುವರಿ ಸೇರಿದ್ರೆ 200 ಯೂನಿಟ್ ಮೀರಬಾರದು. ಆದರೆ 185 ಸರಾಸರಿ ಯುನಿಟ್ ಬಳಸ್ತಿದ್ದವರು ಈ ಬಾರಿ 199 ಯುನಿಟ್ ಬಳಸಿದ್ರೆ ಯೋಜನೆಗೆ ಅರ್ಹರಾಗ್ತಾರೆ. ಇಲ್ಲವೇ 185 ಯೂನಿಟ್ ಬಳಸುವವರು 10% ಹೆಚ್ಚುವರಿ ಯುನಿಟ್ ಗೆ ಅವಕಾಶ ಇದೆ ಎಂದು 203 ಯುನಿಟ್ ಬಳಸಿದ್ರೆ ಆತ ಸಂಪೂರ್ಣ ಬಿಲ್ ಕಟ್ಟಬೇಕು. ಹೀಗೆ ಅನೇಕ ಹಿಡನ್ ಕಂಡೀಷನ್ ಅನ್ನು ಇಂಧನ ಇಲಾಖೆ ಅಪ್ಲೈ ಮಾಡಿದೆ.
ಗೃಹಜ್ಯೋತಿ ಯೋಜನೆ ಶೂನ್ಯ ಬಿಲ್ ವಿಚಾರದಲ್ಲಿ ಕಳೆದ ವರ್ಷ 200 ಯುನಿಟ್ ಮೇಲಿದ್ದವರಿಗೆ ಅನ್ವಯ ಇಲ್ಲ. ಅಂತವರು ಈ ತಿಂಗಳು 150 ಯುನಿಟ್ ಬಳಸಿದ್ರೂ ಬಿಲ್ ಕಟ್ಟೇಕು. ಅವರೇಜ್ 200 ಯುನಿಟ್ ಮೇಲಿದ್ದವರು ಯೋಜನೆಯಿಂದ ಹೊರಗುಳಿಯಲಿದ್ದಾರೆ. ಅಂಥವರು ಈ ತಿಂಗಳು 150 ಯುನಿಟ್ ಬಳಸಿದ್ರೂ ಬಿಲ್ ಕಟ್ಟಬೇಕು.
2022 ಏಪ್ರಿಲ್ 1 ರಿಂದ 2023 ಮಾರ್ಚ್ 31ರವರೆಗೆ ಇಂಧನ ಇಲಾಖೆ ಆವರೇಜ್ ಲೆಕ್ಕಾಚಾರ ಪಡೆದಿದೆ. ಸದ್ಯ ಆವರೇಜ್ ಮೇಲೆ 10% ಹೆಚ್ಚುವರಿ ಬಳಕೆಗೆ ಅವಕಾಶ ಇದೆ. ಆದ್ರೆ 200 ಯೂನಿಟ್ ಮೀರಿದವರಿಗೆ 10% ಹೆಚ್ಚುವರಿ ಬಳಕೆ ಅವಕಾಶವಿಲ್ಲ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IHoly2pCaZPEkuV6RjAGNC
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA


