ಪಿಎಸ್‌ಐ ಮತ್ತು ಸಿಬ್ಬಂದಿ ಎರವಲು ಸೇವೆಯನ್ನು ಮೂರು ವರ್ಷಕ್ಕೆ ಸೀಮಿತಗೊಳಿಸಿ ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ ಆದೇಶ ಹೊರಡಿಸಿದ್ದಾರೆ.
ಮೂರು ವರ್ಷ ಮುಗಿದ ಬಳಿಕ ಮಾತೃ ಘಟಕಕ್ಕೆ ವರ್ಗಾವಣೆ ಮಾಡಲಾಗುತ್ತದೆ. ವಿಶೇಷ ಕಾರಣ ಅಥವಾ ಸಂದರ್ಭದಲ್ಲಿ ಡಿಜಿ ಐಜಿಪಿ ಕಚೇರಿ ಆದೇಶದ ಮೇರೆಗೆ ಗರಿಷ್ಠ 5 ವರ್ಷದವರೆಗೆ ವಿಸ್ತರಣೆ ಮಾಡಲಾಗುತ್ತದೆ. ಮಾತೃ ಘಟಕದಲ್ಲಿ ಕನಿಷ್ಠ ಎರಡು ವರ್ಷ ಕೂಲ್ ಪಿರಿಯೆಡ್ ಪೂರೈಸಬೇಕು.
ಕೂಲ್ ಪಿರಿಯೆಡ್ ಪೂರೈಸದೇ ಮತ್ತೆ ಎರವಲು ಸೇವೆ ನೀಡಲು ನಿರ್ಬಂಧ ವಿಧಿಸಲಾಗಿದೆ. ಗುಪ್ತವಾರ್ತೆ, ಸಿಐಡಿ, ಅರಣ್ಯ ಘಟಕ, ಲೋಕಾಯುಕ್ತ, ಕೆಪಿಟಿಸಿಎಲ್, ಬಿಡಿಎ, ಬಿಎಂಟಿಎಫ್, ಹೈಕೋರ್ಟ್, ಕೆಎಟಿ, ಸಿಎಟಿ, ಡಿಸಿಆರ್‌ಇ ಸೇರಿ ಇತರ ಘಟಕಗಳಲ್ಲಿ ಕರ್ತವ್ಯ ನಿರ್ವಹಿಸುವ ಪಿಎಸ್‌ಐ ಮತ್ತು ಕೆಳ ದರ್ಜೆ ಸಿಬ್ಬಂದಿಗೆ ಈ ಆದೇಶ ಅನ್ವಯವಾಗಲಿದೆ.
ಅವಧಿ ಮೀರಿ ಮುಂದುವರಿಯುವುದು ಆಡಳಿತಾತ್ಮಕ ದೃಷ್ಟಿಯಿಂದ ಸೂಕ್ತವಲ್ಲದ ಹಿನ್ನೆಲೆ ವಿಶೇಷ ಘಟಕದಲ್ಲಿ 3 ವರ್ಷ ಅವಧಿ ಪೂರೈಸಿದ ಎಸ್‌ಐ, ಸಿಬ್ಬಂದಿ ಮಾರ್ಗಸೂಚಿ ಪಾಲನೆ ಮಾಡಬೇಕೆಂದು ಆದೇಶದಲ್ಲಿ ಉಲ್ಲೇಖಿಸಿದ್ದಾರೆ. ಈ ಬಗ್ಗೆ ಎಲ್ಲಾ ಜಿಲ್ಲೆಯ ಎಸ್‌ಪಿ ಮತ್ತು ಪೊಲೀಸ್ ಆಯುಕ್ತರು ಕ್ರಮ ತೆಗೆದುಕೊಳ್ಳಬೇಕೆಂದು ಸೂಚಿಸಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 81233 82149 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IHoly2pCaZPEkuV6RjAGNC
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA


