ಮಾಜಿ ಸಚಿವ ಸುರೇಶ್ ಕುಮಾರ್ ಅವರು ಹೈಕೋರ್ಟ್ ರಿಜಿಸ್ಟ್ರಾರ್ ಅವರಿಗೆ ಪತ್ರ ಬರೆದಿರುವ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಅವರು ಪ್ರತಿಕ್ರಿಯೆ ನೀಡಿದ್ದಾರೆ.
“ನನ್ನ ಮೇಲೆ ಪ್ರಕರಣ ಇದೆಯೋ ಇಲ್ಲವೋ ಅದು ಬೇರೆ ಪ್ರಶ್ನೆ. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ಅವರ ಮೇಲೆ ಪ್ರಕರಣ ಇರಲಿಲ್ಲವೇ? ಆಗ ಅವರು ನ್ಯಾಯಾಂಗಕ್ಕೆ ಸಂಬಂಧಿಸಿದ್ದ ಕಾರ್ಯಕ್ರಮಗಳಲ್ಲಿ ಹೇಗೆ ಭಾಗವಹಿಸುತ್ತಿದ್ದರು? ನನಗೆ ಯಾರಿಗೂ ಮುಜುಗರ ತರುವ ಉದ್ದೇಶವಿಲ್ಲ. ನನಗೆ ಅಂತಹ ಕಾರ್ಯಕ್ರಮಕ್ಕೆ ಹೋಗುವ ಆಸಕ್ತಿಯೂ ಇಲ್ಲ. ಕೆಲವು ನ್ಯಾಯಾಧೀಶರು ಕೂಡ ತಮ್ಮ ಮನೆಯಲ್ಲಿನ ಮದುವೆಗೂ ನನಗೆ ಆಮಂತ್ರಣ ನೀಡಿದ್ದರು. ನಾನು ಅವರ ಮದುವೆಯಲ್ಲಿ ಭಾಗವಹಿಸಿದರೆ ಇಂತಹ ಪ್ರಶ್ನೆಗಳು ಉದ್ಭವಿಸುತ್ತವೆ ಎಂಬ ಕಾರಣಕ್ಕೆ ಆ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿಲ್ಲ. ನಾನು ಈಗ ರಾಜ್ಯದ ಉಪಮುಖ್ಯಮಂತ್ರಿಯಾಗಿದ್ದು, ಅನೇಕ ನ್ಯಾಯಾಲಯದ ಕಾರ್ಯಕ್ರಮಗಳಿಗೆ ಭೇಟಿ ನೀಡಿದ್ದೇನೆ. ನನ್ನ ಮೇಲೆ ರಾಜಕೀಯ ಪ್ರೇರಿತ ಪ್ರಕರಣಗಳಿದ್ದು, ನನ್ನನ್ನು ದೋಷಿ ಎಂದು ತೀರ್ಮಾನ ಮಾಡಲಾಗಿಲ್ಲ. ನನ್ನ ಜತೆಗೆ ಯಡಿಯೂರಪ್ಪ ಅವರು ಅನೇಕ ಪ್ರಕರಣ ಎದುರಿಸುತಿದ್ದರು. ಆವರು ಮುಖ್ಯಮಂತ್ರಿಯಾಗಿದ್ದಾಗ ಸುರೇಶ್ ಕುಮಾರ್ ಗೆ ಈ ವಿಚಾರ ತಿಳಿದಿರಲಿಲ್ಲವೇ? ಆಗ ಯಾಕೆ ಪತ್ರ ಬರೆಯಲಿಲ್ಲ? ಅವರಿಗೊಂದು ನ್ಯಾಯ? ನನಗೊಂದು ನ್ಯಾಯವೇ ಇದೆಲ್ಲವನ್ನು ನಾನು ರಾಜಕೀಯವಾಗಿಯೇ ಎದುರಿಸುತ್ತೇನೆ” ಎಂದು ತಿಳಿಸಿದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IHoly2pCaZPEkuV6RjAGNC
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA


