ವ್ಯಾಸಂಗಕ್ಕಾಗಿ ಕಾಲೇಜಿಗೆ ಬರುವ ಕೆಲ ವಿದ್ಯಾರ್ಥಿ- ವಿದ್ಯಾರ್ಥಿನಿಯರು ತುಮಕೂರು ನಗರದ ವಿವಿಧ ಉದ್ಯಾನವನಗಳಲ್ಲಿ ಕುಳಿತು ಸುತ್ತಾಡುತ್ತಿದ್ದನ್ನು ಗಮನಿಸಿದ್ದ ಪೊಲೀಸರು ದಿಢೀರ್ ಪ್ರತ್ಯಕ್ಷರಾಗಿ ಅವರನ್ನು ಪ್ರಶ್ನಿಸಿದರು.
ಏಕಾಏಕಿ ಪೊಲೀಸರನ್ನು ಕಂಡ ಕಾಲೇಜ್ ವಿದ್ಯಾರ್ಥಿ ವಿದ್ಯಾರ್ಥಿನಿಯರು ಶಾಕ್ ಆಗಿದ್ದಾರೆ. ಕಲ್ಪತರು ಪಡೆ, ಜಿಲ್ಲೆಯಲ್ಲಿ ರಚನೆಯಾಗಿದೆ. ಈ ವಿಶೇಷ ಪೊಲೀಸ್ ತಂಡ ಇಂದು ವಿಭಿನ್ನವಾಗಿ ಸಕ್ರಿಯವಾಗಿತ್ತು.
ಕಾಲೇಜಿಗೆ ಹೋಗದೆ ಪಾರ್ಕ್ ಗಳಲ್ಲಿ ಮೋಜು ಮಾಡುತ್ತಿದ್ದ ಜೋಡಿಗಳು ಕಲ್ಪತರುಪಡೆಯ ಪೊಲೀಸ್ ಸಿಬ್ಬಂದಿಗಳನ್ನು ಕಂಡು ದಂಗಾಗಿದ್ದಾರೆ.
ತುಮಕೂರು ನಗರದ ಅಮಾನಿಕೆರೆ , ಟೌನ್ ಹಾಲ್ ಪಾರ್ಕ್ ಗಳಲ್ಲಿ ಕುಳಿತಿದ್ದ ಜೋಡಿಗಳಿಗೆ ಪೊಲೀಸ್ ಸಿಬ್ಬಂದಿಗಳು ಬುದ್ಧಿ ಮಾತು ಹೇಳಿದ್ದಾರೆ. ಈ ವೇಳೆ ವಿದ್ಯಾರ್ಥಿಗಳು ತಾವು ಮಾಡಿದ ಕೆಲಸಕ್ಕೆ ಪೊಲೀಸರ ಎದುರು ತಲೆ ತಗ್ಗಿಸಿನಿಂತಿದ್ದಾರೆ.
ವಿದ್ಯಾರ್ಥಿಗಳ ಅತಿರೇಕದ ವರ್ತನೆಗೆ ಪೊಲೀಸರು ಸರಿಯಾದ ಪಾಠ ಹೇಳಿದ್ದಾರೆ. ಅವರ ಕಾರ್ಯ ಶ್ಲಾಘನೀಯ ಎಂದು ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IHoly2pCaZPEkuV6RjAGNC
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA


