ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಬಹಿರಂಗವಾಗಿ ಹೇಳಿಕೆ ನೀಡಿದ್ದರ ಬೆನ್ನಲ್ಲೇ, ಅನರ್ಹಗೊಂಡಿದ್ದ ರಾಹುಲ್‌ಗಾಂಧಿ, ಕೋರ್ಟ್ ಮೊರೆ ಹೋಗಿ ಸದ್ಯ ಮತ್ತೆ ಸಂಸತ್ ಸದಸ್ಯನ ಸ್ಥಾನ ಗಿಟ್ಟಿಸಿಕೊಂಡಿದ್ದು ಇಂದು ಇತಿಹಾಸ. ರಾಹುಲ್‌ಗಾಂಧಿ ಅವರದ್ದು ರಾಷ್ಟ್ರ ರಾಜಕಾರಣಕ್ಕೆ ಸಂಬಂಧಿಸಿದ ಸುದ್ದಿಯಾದ್ರೆ, ಇತ್ತ ರಾಜ್ಯದಲ್ಲೂ ಕೂಡ ಇದೇ ಮಾದರಿಯ ಪ್ರಕರಣವೊಂದು ದೊಡ್ಡ ಸಂಚಲನ ಉಂಟು ಮಾಡುವ ಲಕ್ಷಣಗಳು ಗೋಚರಿಸುತ್ತಿದೆ.
ಮಾಜಿ ಗೃಹ ಸಚಿವ ಹಾಗೂ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕ ಆರಗ ಜ್ಞಾನೇಂದ್ರ ಜನಾಂಗೀಯ ನಿಂದನೆ ಹಾಗೂ ಪ್ರಾಂತ್ಯವಾರು ಭೇಧವನ್ನು ಉಂಟು ಮಾಡಿರುವ ಆರೋಪ ಎದುರಿಸುತ್ತಿದ್ದು, ಅಖಿಲ ಭಾರತ ವೀರಶೈವ ಮಹಾಸಭಾ, ಆರಗ ಜ್ಞಾನೇಂದ್ರರನ್ನು ಶಾಸಕ ಸ್ಥಾನದಿಂದ ಆನರ್ಹಗೊಳಿಸುವಂತೆ ಸ್ಪೀಕರ್ ಗೆ ಮನವಿ ಪತ್ರ ನೀಡಿದೆ. ಇಷ್ಟು ಮಾತ್ರವಲ್ಲದೇ ಬಿಜೆಪಿ ಪಕ್ಷ ಕೂಡ ಆರಗ ಜ್ಞಾನೇಂದ್ರ ಅವರನ್ನು ಪಕ್ಷದಿಂದ ವಜಾ ಮಾಡಬೇಕೆಂದು ಒತ್ತಾಯಿಸಿದ್ದು, ಸದ್ಯ ಅನರ್ಹತೆಯ ತೂಗುಗತ್ತಿ ಆರಗ ಜ್ಞಾನೇಂದ್ರರ ತಲೆಯ ಮೇಲೆ ತೂಗಾಡುತ್ತಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IHoly2pCaZPEkuV6RjAGNC
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA


