ಧಾರವಾಡ: ಮತ್ತೇ ಮಹದಾಯಿ ಹೋರಾಟ ಮುನ್ನಲೆಗೆ ಬಂದ ವಿಚಾರವಾಗಿ ಮಾತನಾಡಿದ ನವಲಗುಂದ ಶಾಸಕ ಎನ್.ಎಚ್. ಕೋನರೆಡ್ಡಿ, ರೈತರಿಗೆ ನಮ್ಮ ವಿರುದ್ಧ ಹೋರಾಟ ಮಾಡಲು ಬೇಡ ಎಂದಿಲ್ಲ. ಕೇಂದ್ರ ಅರಣ್ಯ ಇಲಾಖೆ ಅನುಮತಿ ಕೊಡಬೇಕು.
ಅನುಮತಿ ಕೊಟ್ಟರೆ ನಾಳೆಯೇ ಕೆಲಸ ಆರಂಭ ಆಗುತ್ತದೆ. ನಾವೇ ರೈತರ ಪರ ಹೋರಾಟ ಮಾಡುತ್ತೇವೆ. ನಾವು ಯೋಜನೆ ಜಾರಿ ಆಗಲಿ ಎನ್ನುವವರು, ನನ್ನ ಹೋರಾಟ ಇರುವುದೇ ಇದಕ್ಕಾಗಿ. ನಾನು ಟೀಕೆ ಟಿಪ್ಪಣಿ ಮಾಡುವುದಿಲ್ಲ. ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಪ್ರಧಾನಿಗೆ ಆತ್ಮೀಯರು. ಈ ಅನುಮತಿ ಕೊಡಿಸುವುದು ಅವರಿಗೆ ದೊಡ್ಡ ಕೆಲಸವಲ್ಲ. ರಾಜ್ಯದ ಹಿತಕ್ಕಾಗಿ ಅನುಮತಿ ಕೊಡಿಸಬೇಕು. ಇದಕ್ಕಿಂತ ದೊಡ್ಡ ಮಾತು ಏನಿಲ್ಲ. ಅದರ ಕ್ರೆಡಿಟ್ ಬೇಕಾದರೆ ನೀವೇ ತೆಗೆದುಕೊಳ್ಳಿ. ಆದರೆ ಲೋಕಸಭಾ ಚುನಾವಣೆ ಮೊದಲು ಇದನ್ನು ಮಾಡಲಿ ಎಂದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 81233 82149 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IHoly2pCaZPEkuV6RjAGNC
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA


