ಕೋಣನಕುಂಟೆಯಲ್ಲಿ ನಡೆದ ಒವೈಎಲ್ ಬಾತ್ ಸೋಪ್ (ಪ್ಲಾಂಟ್ ಸೈನ್ಸ್) ಮಿಸೆಸ್ ಇಂಡಿಯಾ ಕರ್ನಾಟಕ 2023 ಗ್ರಾಂಡ್ 7ನೇ ಆವೃತ್ತಿಯ ರಾಜ್ಯ ಫೈನಲ್ ನಲ್ಲಿ ಸ್ನೇಹಾ ಶ್ರೀಧರ್ ಕಿರೀಟ ಮುಡಿಗೇರಿಸಿಕೊಂಡರು.
ಗೋಡಂಬಿ ಶ್ರೀಧರ್ ಅವರ ಮಗಳಾದ ಸ್ನೇಹಾ ಶ್ರೀಧರ್ ಬಿ. ಕಾಂ ಉತ್ತೀರ್ಣರಾದ ಮೇಲೆ ತಂದೆಯ ಕೇಟರಿಂಗ್ ಸರ್ವೀಸ್ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದರು. ಹೋಮಿಯೋಪಥಿ ವೈದ್ಯ ರೋಹಿತ್ ಶ್ರೀವತ್ಸನ್ ಜತೆಗೆ ಮದುವೆಯಾದ ಮೇಲೆ ಬದುಕಿನ ಚಿತ್ರಣ ಇನ್ನೊಂದು ರೀತಿ ಬದಲಾಯಿಸಿಕೊಂಡರು.
ವಿಕ್ಟರಿ ಹೋಮಿಯೊಪಥಿ ಸ್ಪೆಷಾಲಿಟಿ ಕ್ಲಿನಿಕ್ ನ ಆಡಳಿತ ವ್ಯವಹಾರಗಳನ್ನು ನೋಡಿಕೊಳ್ಳುವ ಜವಾಬ್ದಾರಿ ವಹಿಸಿಕೊಂಡರು. ಜೊತೆಗೆ ವೈದ್ಯಕೀಯ ಅಭ್ಯಾಸ ನಡೆಸಿದರು. ಎರಡು ಮಕ್ಕಳ ತಾಯಿ ಆಗಿರುವ ಸ್ನೇಹಾ ಈಗ ಮಿಸೆಸ್ ಇಂಡಿಯಾ ಕರ್ನಾಟಕ 2023 ಪ್ರಶಸ್ತಿ ಪಡೆದು ಸಾಧನೆ ಮಾಡಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8123382149 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA


