ದೇಹಕ್ಕೆ ಹೊಂದಿಕೆಯಾಗದ ಮೂತ್ರ ಪಿಂಡದ ಕಸಿ ಮಾಡಿಸಿಕೊಂಡು ನಂತರ ಮೂತ್ರನಾಳದ ಸೋಂಕಿಗೆ ಒಳಗಾಗಿದ್ದ 51 ವರ್ಷದ ಒಮಾನ್ ಮಹಿಳೆಗೆ ಫೋರ್ಟಿಸ್ ಆಸ್ಪತ್ರೆ ವೈದ್ಯರು ರೋಬೋಟ್ ಸಹಾಯದಿಂದ ಯಶಸ್ವಿ ಸಂಕೀರ್ಣ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ.
ಮೂತ್ರಶಾಸ್ತ್ರ ತಜ್ಞ, ಯುರೋ-ಆಂಕೊಲಾಜಿ ಮತ್ತು ರೋಬೋಟಿಕ್ ಸರ್ಜರಿ ಹಿರಿಯ ನಿರ್ದೇಶಕ ಡಾ. ಮೋಹನ್ ಕೇಶವಮೂರ್ತಿ ಅವರ ತಂಡ ಶಸ್ತ್ರಚಿಕಿತ್ಸೆ ನೆರವೇರಿಸಿತು. ಈ ಕುರಿತು ಮಾತನಾಡಿರುವ ಡಾ. ಮೋಹನ್ ಕೇಶವಮೂರ್ತಿ, 51 ವರ್ಷದ ರೇಷ್ಮಾ ಒಂದು ವರ್ಷದ ಹಿಂದೆ ಕೆಲ ಕಾರಣದಿಂದ ಮೂತ್ರಪಿಂಡ ಕಳೆದುಕೊಂಡು, ಪಾಕಿಸ್ತಾನದಲ್ಲಿ ಮೂತ್ರಪಿಂಡ ಕಸಿ ಮಾಡಿಸಿಕೊಂಡಿದ್ದರು.
ಆದರೆ, ಇದು ಇವರ ದೇಹ ಹಾಗೂ ರಕ್ತಕ್ಕೆ ಹೊಂದಿಕೆಯಾಗಿರಲಿಲ್ಲ. ಮೂತ್ರನಾಳ ಕಸಿ ಮಾಡುವಾಗ ಮೂತ್ರನಾಳದ ಸೈಂಟಿಂಗ್ ಅನ್ನು (ಡಬಲ್ ಜೆ ಸ್ಟೆಂಟ್) ಅಳವಡಿಸಲಾಗಿತ್ತು. ಮೂತ್ರವಿಸರ್ಜನೆಗೆಂದು ಪ್ಲಾಸ್ಟಿಕ್ ಟ್ಯೂಬ್ ಅಳವಡಿಸಲಾಗಿತ್ತು. ಇದು ತೀರ ತೆಳುವಾದ್ದರಿಂದ ಕೇವಲ ಒಂದು ವರ್ಷದಲ್ಲಿಯೇ ಆ ಡಬಲ್ ಜೆ ಸ್ಟಂಟ್ ಮುರಿದಿತ್ತು. ಮೊದಲೇ ಹೊಂದಿಕೆಯಾಗದ ಮೂತ್ರಪಿಂಡವಾದ್ದರಿಂದ ಸ್ಟಂಟ್ ಮುರಿದು, ರೇಷ್ಮಾ ಅವರಿಗೆ ಮೂತ್ರಕೋಶದ ಸೋಂಕು ಹರಡಲು ಶುರುವಾಗಿತ್ತು ಮುರಿದು ಹೋದ ಸ್ಟಂಟ್ ನನ್ನು ತೆಗೆದು ಹಾಕುವುದು ಅನಿವಾರ್ಯವಾಗಿತ್ತು ಎಂದು ತಿಳಿಸಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8123382149 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA


