ಬೆಂಗಳೂರು: ಪೈಂಟಿಂಗ್ ಕೆಲಸಕ್ಕೆಂದು ಹೋಗಿ ಮನೆಯಿಂದ ಚಿನ್ನಾಭರಣ ಕದ್ದೊಯ್ದಿದ್ದ ಆರೋಪಿ ಉಮೇಶ್ ಪ್ರಸಾದ್ ಜಾಧವ (32) ಅವರನ್ನು ಬಸವನಗುಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಉತ್ತರ ಪ್ರದೇಶದ ಆರೋಪಿ ಕೆಲಸ ಹುಡುಕಿಕೊಂಡು ಬಂದಿದ್ದ. ಠಾಣೆ ವ್ಯಾಪ್ತಿಯ ಮನೆಯೊಂದರಲ್ಲಿ ಕಳವು ಮಾಡಿ ಊರಿಗೆ ಪರಾರಿಯಾಗಿದ್ದ.
‘ಇತ್ತೀಚೆಗೆ ಪುನಃ ಬೆಂಗಳೂರಿಗೆ ಬಂದಿದ್ದಾಗ ಸೆರೆ ಹಿಡಿಯಲಾಗಿದೆ’ ಎಂದು ಪೊಲೀಸರು ಹೇಳಿದರು. ‘ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಸಂಬಳ ಕಡಿಮೆ ಎಂದು ಕೆಲಸ ಬಿಟ್ಟಿದ್ದು, ಪೈಂಟಿಂಗ್ ಕೆಲಸ ಮಾಡುತ್ತಿದ್ದ. ಪೈಂಟಿಂಗ್ ವೇಳೆ ಮನೆಯಲ್ಲಿ ಆಭರಣವಿಟ್ಟಿರುವ ಜಾಗ ತಿಳಿದುಕೊಳ್ಳುತ್ತಿದ್ದ. ಪೈಂಟಿಂಗ್ ಕೆಲಸ ಅಂತಿಮ ಹಂತದಲ್ಲಿರುವಾಗ, ಚಿನ್ನಾಭರಣ ಕದ್ದುಕೊಂಡು ಪರಾರಿಯಾಗುತ್ತಿದ್ದ. ಸದ್ಯ ಈತನಿಂದ 100 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ’ ಎಂದು ತಿಳಿಸಿದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8123382149 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA


