ಆಟೋ ಚಾಲಕನೋರ್ವ ಆಟೋ ರಿಕ್ಷಾದ ಹಿಂಬದಿ ಮಾರಕಾಸ್ತ್ರವನ್ನು ಅಳವಡಿಸಿ ಪುಂಡಾಟ ಮೆರೆದ ಘಟನೆ ನಡೆದಿದ್ದು, ಇದರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಚಾಲಕನ ವಿರುದ್ಧ ಕ್ರಮಕ್ಕೆ ನೆಟ್ಟಿಗರು ಒತ್ತಾಯಿಸುತ್ತಿದ್ದಾರೆ.
ಆಟೋರಿಕ್ಷಾವೊಂದರ ಹಿಂಬದಿಯಲ್ಲಿ ಮಾರಕಾಸ್ತ್ರ ನೋಡಿ ನೆಟ್ಟಿಗರು ಬೆಚ್ಚಿ ಬಿದ್ದಿದ್ದಾರೆ. ಇದರ ಫೋಟೋವನ್ನು ಥರ್ಡ್ ಐ ಎಂಬ ಟ್ವಿಟರ್ ಖಾತೆಯಲ್ಲಿ ಶುಕ್ರವಾರ ಹಂಚಿಕೊಳ್ಳಲಾಗಿದೆ. ಫೋಟೋದೊಂದಿಗೆ ಇದು ನಕಲಿಯೇ ಅಥವಾ ಅಸಲಿಯೇ ಎಂದು ಬರೆಯಲಾಗಿದೆ.
ಸದ್ಯ ಈ ಫೋಟೋ ಸಾವಿರಾರು ಮಂದಿ ನೆಟ್ಟಿಗರ ಕಣ್ಣಿಗೆ ಬಿದ್ದಿದೆ. ಹೊಸಬಸವನಪುರದ ಭಟ್ಟರಹಳ್ಳಿಯಲ್ಲಿ ಈ ಫೋಟೋವನ್ನು ಸೆರೆಹಿಡಿಯಲಾಗಿದೆ ಎಂದು ಹೇಳಲಾಗುತ್ತಿದೆ. ಈ ಫೋಟೋ ನೋಡಿದ ನೆಟಿಜನ್ ಗರು ಚಾಲಕನ ಉದ್ದೇಶವಾದರೂ ಏನು ಎಂಬುದನ್ನು ಪ್ರಶ್ನಿಸಿದ್ದಾರೆ. ಇಂತಹ ವಸ್ತುಗಳನ್ನು ಹಾಕುವುದರ ಅರ್ಥವೇನು? ಎಂದು ಟಾರ್ಕ್ ನೈಟ್ ಖಾತೆದಾರ ಪ್ರಶ್ನಿಸಿದ್ದಾನೆ.


