ಇಡ್ಲಿ ತಯಾರಿಕೆಗೆ ಬಳಸುವ ಬಿಸಿ ನೀರಿನ ಬಾಯ್ಲರ್ ಸ್ಫೋಟಗೊಂಡು ಮೂವರು ಗಾಯಗೊಂಡಿರುವ ಘಟನೆ ನಾಗರಭಾವಿಯ ನಮ್ಮೂರ ತಿಂಡಿ ಹೋಟೆಲಿನಲ್ಲಿ ನಡೆದಿದೆ.
ಕಿಚನ್ ನಲ್ಲಿ ಕೆಲಸ ಮಾಡುವ ಐಶ್ವರ್ಯ (19) ಬಸಿಕುಮಾರ್ (20) ಕ್ಯಾಶಿಯರ್ ಸಹೋದರ ಕಾರ್ತಿಕ್ (18) ಎಂಬುವರು ಗಾಯಗೊಂಡಿದ್ದಾರೆ.
ಏಕಾಏಕಿ ಬಾಯ್ಸರ್ ಸ್ಪೋಟಗೊಂಡ ಪರಿಣಾಮ ಮೂವರೂ ಸಹ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಫೋಟದ ತೀವ್ರತೆಗೆ ಅಡುಗೆ ಮನೆಯಲ್ಲಿನ ಸಾಮಗ್ರಿಗಳು ಸಂಪೂರ್ಣ ಜಖಂ ಆಗಿವೆ. ಸ್ಥಳಕ್ಕೆ ಜ್ಞಾನಭಾರತಿ ಠಾಣಾ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿದ್ದಾರೆ.


