ರಾಜ್ಯದ ಜನರು ಶಾಂತಿ, ಸಾಮರಸ್ಯ ಹಾಗೂ ಸೌಹಾರ್ದತೆಯಿಂದ ಬದುಕಬೇಕಾದರೆ ‘ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಹಾಗೂ ಸಂರಕ್ಷಣಾ ಕಾಯ್ದೆ 2022’ ಮತ್ತು ‘ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಸಂರಕ್ಷಣೆ ಹಕ್ಕು (ಮತಾಂತರ ನಿಷೇಧ) ಕಾಯ್ದೆ’ಯನ್ನು ಹಿಂಪಡೆಯಬಾರದು ಎಂದು ಮಠಾಧೀಶರು ನಿರ್ಣಯ ಕೈಗೊಂಡಿದ್ದಾರೆ.
ವಿಶ್ವ ಹಿಂದೂ ಪರಿಷತ್ ನಗರದಲ್ಲಿ ಭಾನುವಾರ ಹಮ್ಮಿಕೊಂಡ ‘ಸಂತ ಸಮ್ಮೇಳನ’ದಲ್ಲಿ 10ಕ್ಕೂ ಅಧಿಕ ಮಠಾಧೀಶರು ಭಾಗವಹಿಸಿ, ಎರಡು ನಿರ್ಣಯಗಳನ್ನು ಕೈಗೊಂಡರು.
ಮೇಲುಕೋಟೆ ಯತಿರಾಜ ಮಠದ ಯದುಗಿರಿ ಯತಿರಾಜ ನಾರಾಯಣ ರಾಮಾನುಜ ಜೀಯರ್ ಸ್ವಾಮೀಜಿ ಅಧ್ಯಕ್ಷತೆಯಲ್ಲಿ ಗೋ ಹತ್ಯೆ, ಮಂತಾಂತರ, ಲವ್ ಜಿಹಾದ್, ಹಿಂದೂ ಅವಿಭಕ್ತ ಕುಟುಂಬ ಪದ್ಧತಿ, ಪರಿಸರ, ಸಾಮರಸ್ಯ ಸೇರಿ ವಿವಿಧ ವಿಷಯಗಳ ಬಗ್ಗೆ ಚರ್ಚಿಸಲಾಯಿತು. ಗೋಹತ್ಯೆ ನಿಷೇಧ ಮತಾಂತರ ನಿಷೇಧ ಕಾಯ್ದೆಯನ್ನು ವಾಪಸ್ ಪಡೆದರೆ ಸಂತರು ವಿಧಾನಸೌಧಕ್ಕೆ ಮುತ್ತಿಗೆ ಹಾಕಬೇಕಾಗುತ್ತದೆ. ಯಾವುದೇ ಕಾರಣಕ್ಕೂ ಸರ್ಕಾರ ಈ ಕಾಯ್ದೆಗಳನ್ನು ವಾಪಸ್ ಪಡೆಯಬಾರದು.
ಪರಮಾತ್ಮ ಜಿ. ಮಹಾರಾಜ್, ರಾಷ್ಟ್ರೀಯ ಸಂತ ಸಂಘದ ನಿರ್ದೇಶಕ ಗೋಕಾಕದ ಮಹಾಲಿಂಗೇಶ್ವರ ಮಠದ ರವಿಶಂಕರ ಶಿವಾಚಾರ್ಯ ಸ್ವಾಮೀಜಿ, ಭಾರತ ಮಾತಾ ಮಂದಿರದ ಸಾಧು ರಂಗರಾಜನ್, ರಾಮಕೃಷ್ಣ ಮಿಷನ್‌ನ ಚಂದ್ರೇಶಾನಂದಜೀ, ಗೀತ ಆಶ್ರಮದ ಯೋಗಾನಂದ ಸ್ವಾಮಿ, ಅಜ್ಜಯ್ಯ ಆಶ್ರಮದ ಇ. ಈರಣ್ಣ, ಚಂದಾಪುರದ ಶಾರದಾ ಆಶ್ರಮದ ಯತೀಶ್ವರಿ ರಾಮ ಪ್ರಿಯಾಂಬ, ಆದಿಮುನಿ ಲಿಂಗೇಶ್ವರ ಸಂಸ್ಥಾನದ ನಾಗಲಾಂಬ ಶಿವಾಚಾರ್ಯ, ಧಾರವಾಡ ಪರಮಾತ್ಮ ಜಿ. ಮಹಾರಾಜ್, ಬೆಂಗಳೂರಿನ ಆರೂಢ ಭಾರತೀ ಸ್ವಾಮೀಜಿ, ದೇವನಹಳ್ಳಿಯ ನಾರಾಯಣ ಸರಸ್ವತಿ, ಸಿದ್ಧಾರೂಢದ ಉಮಾ ಭಾರತಿ, ಚಿನ್ಮಯ ಮಿಷನ್‌ನ ಅಭಯ ಚೈತನ್ಯ ಸಮ್ಮೇಳನದಲ್ಲಿ ಭಾಗವಹಿಸಿದ್ದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8123382149ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA


