ತುಮಕೂರು ಗ್ರಾಮಾಂತರ: ಶಾಸಕರಾದ ಡಿ.ಸಿ.ಗೌರಿಶಂಕರ್ ರವರು ಹೆಬ್ಬೂರಿನ ಸಿದ್ದ ನಾಯಕನ ಪಾಳ್ಯದ ನೂತನ ಶ್ರೀ ಅಭಯ ಆಂಜನೇಯ ಸ್ವಾಮಿ ದೇವಾಲಯದ ಸ್ಥಿರ ಬಿಂಬ ಪ್ರತಿಷ್ಠಾಪನೆ, ಹಾಗೂ ಜ್ಞಾನ ವಿಮಾನ ಗೋಪುರ ಕಳಸ ಸ್ಥಾಪನೆ, ಜೀರ್ಣೋದ್ದಾರ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ದೇವರ ದರ್ಶನದ ಬಳಿಕ, ಭಕ್ತಾದಿಗಳಿಗೆ ಸ್ವತಃ ಶಾಸಕರೇ ಊಟ ಬಡಿಸಿದರು. ಈ ದೇವಾಲಯದ ಜೀರ್ಣೋದ್ಧಾರ ಕಾರ್ಯಕ್ಕೆ ಶಾಸಕರ ಕುಟುಂಬದ ವತಿಯಿಂದ ವೈಯಕ್ತಿಕವಾಗಿ 2,50,000 (ಎರಡೂವರೆ ಲಕ್ಷ) ಧನಸಹಾಯ ನೀಡಿದರು.
ತುಮಕೂರು ಸಿದ್ದಗಂಗಾ ಮಠ ಬಿಟ್ಟರೆ ಪ್ರತಿನಿತ್ಯ ಅನ್ನದಾಸೋಹ ಮಾಡುವ ಕುಟುಂಬ ಚನ್ನಿಗಪ್ಪ ರವರ ಕುಟುಂಬವಾಗಿದ್ದು, ಅದರಂತೆಯೇ ಮೂರು ದಿನಗಳ ಕಾಲ ನಡೆದ ದೇವಾಲಯದ ಉದ್ಘಾಟನಾ ಕಾರ್ಯಕ್ರಮಕ್ಕೆ ಸಂಪೂರ್ಣ ಊಟದ ವ್ಯವಸ್ಥೆಯನ್ನು ಸ್ವತಃ ಶಾಸಕರೇ ಕಲ್ಪಿಸಿದ್ದರು.
ವರದಿ: ಸಿದ್ದೇಶ್.N,S.ನೇಗಲಾಲ. ತುಮಕೂರು.