ತುರುವೇಕೆರೆ : ದೇವರಾಜ್ ಅರಸು ಅವರ ಬಗ್ಗೆ ಮಾತನಾಡಲು ಐದರಿಂದ ಹತ್ತು ನಿಮಿಷ ಸಾಕಾಗುವುದಿಲ್ಲ ವಿಸ್ತೃತವಾಗಿ ವಿಚಾರಗಳನ್ನು ಮಾತನಾಡಬೇಕು ಎಂದು ತಾಲೂಕಿನ ತಹಶೀಲ್ದಾರ್ ರೇಣು ಕುಮಾರ್ ಅಭಿಪ್ರಾಯ ಪಟ್ಟರು .
ಅವರು ತಾಲೂಕು ಕಚೇರಿಯ ಆವರಣದಲ್ಲಿ ಏರ್ಪಡಿಸಿದ್ದ ತಾಲೂಕು ಆಡಳಿತ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ಏರ್ಪಡಿಸಿದ್ದ ಮಾಜಿ ಮುಖ್ಯಮಂತ್ರಿ ದಿವಂಗತ ಡಿ ದೇವರಾಜ ಅರಸುರವರ 108ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇವತ್ತಿನ ಪರಿಸ್ಥಿತಿ ಅನುಗುಣವಾಗಿ ರಾಜ್ಯ ಸರ್ಕಾರ ಏನೇನು ಸೂಚನೆ ನೀಡಿದೆ ಅದನ್ನು ಸಾರ್ವಜನಿಕರಿಗೆ ತಲೆಪಿಸುವುದು ನಮ್ಮೆಲ್ಲರ ಜವಾಬ್ದಾರಿ ನಾವೆಲ್ಲ ಬಂದಿರುವುದು ಸಾರ್ವಜನಿಕರ ಸೇವೆ ಮಾಡಲು ಸರ್ಕಾರದ ಯೋಜನೆಗಳನ್ನು ಸರ್ಕಾರದ ಸೇವೆಗಳನ್ನು ಸಾರ್ವಜನಿಕರಿಗೆ ತಲುಪಿಸುವುದೇ ನಮ್ಮ ಆದ್ಯ ಕರ್ತವ್ಯ ಹಾಗೂ ಜನಸೇವೆಯನ್ನು ನಾವು ಮಾಡುತ್ತಿದ್ದೇವೆ ಇದೇ ರೀತಿ ಅರಸು ಅವರ ಹಾದಿಯಲ್ಲಿ ನಡೆಯೋಣ ಆದರ್ಶಗಳನ್ನು ಅಳವಡಿಸಿಕೊಳ್ಳೋಣ ಅವರ ಜಯಂತಿಯನ್ನು ಸರ್ಕಾರ ದಿನವನ್ನಾಗಿ ಮಾಡಬೇಕು ಎಂದು ರಾಜ್ಯ ಸರ್ಕಾರ ಸೂಚನೆ ನೀಡಿದೆ, ಎಲ್ಲ ವರ್ಗದ ಎಲ್ಲ ಧರ್ಮದ ಭಾಷೆಯ ಬಗ್ಗೆ ಹಲವಾರು ಜನರಲ್ಲಿ ಸೌಹಾರ್ದತೆಯನ್ನು ಉಂಟುಮಾಡಬೇಕು ,ಎಲ್ಲರನ್ನೂ ಒಗ್ಗೂಡಿಸಬೇಕು ಹಿಂಸಾಚಾರವನ್ನು ಬಿಡಿಸಬೇಕು ಹಾಗೂ ಈ ದಿನವನ್ನು ಸದ್ಭಾವನಾ ದಿನವನ್ನಾಗಿ ಆಚರಿಸುತ್ತಿದ್ದೇವೆ, ಅದರಲ್ಲೂ ಅರಸುರವರ 108ನೇ ಜನ್ಮದಿನ ಈ ಸದ್ಬಾವನ ದಿನವನ್ನು ಆಚರಿಸುತ್ತಿರುವುದು ನಮ್ಮೆಲ್ಲರ ಸೌಭಾಗ್ಯ ಹಾಗೂ ಮಾದರಿಯಾಗಿದೆ ಸರ್ಕಾರದ ಈ ದಿನ ತಂದು ಪ್ರತಿಜ್ಞಾ ವಿಧಿಯನ್ನು ನೀಡಿರುತ್ತಾರೆ ಅದರಂತೆ ಈ ಪ್ರತಿಜ್ಞಾವಿಧಿಯನ್ನು ನುಡಿಯೋಣ ಎಂದರು.
ಇದೇ ಸಂದರ್ಭದಲ್ಲಿ ರಾಜ್ಯ ಸರ್ಕಾರಿ ನೌಕರ ಸಂಘದ ತಾಲೂಕು ಅಧ್ಯಕ್ಷರಾದ ನಂ ರಾಜುರವರು ಡಿ ದೇವರಾಜ್ ಅರಸುರವರ ಇತಿಹಾಸವನ್ನು ಹುಟ್ಟು ಹಾಗೂ ಅವರು ಬೆಳೆದು ಬಂದ ದಾರಿಯನ್ನ ಮತ್ತೊಮ್ಮೆ ನೆನಪಿಸಿಕೊಟ್ಟರು .
ಪಟ್ಟಣ ಪಂಚಾಯಿತಿಯ ಮುಖ್ಯ ಅಧಿಕಾರಿ ಶ್ರೀನಿವಾಸ್ ಬಾಬುರವರು ಪ್ರತಿಜ್ಞಾವಿಧಿಯನ್ನು ಬೋಧಿಸಿದರು. ದೇವರಾಜ್ ಅರಸು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿಸ್ತರಣಾಧಿಕಾರಿಗಳಾದ ಭಾನುಮತಿ ರವರು ಕಾರ್ಯಕ್ರಮಕ್ಕೆ ಎಲ್ಲರನ್ನೂ ಸ್ವಾಗತಿಸಿದರು .
ವಿಶೇಷವಾಗಿ ತಾಲೂಕಿನ ದೇವರಾಜ ಅರಸು ವಸತಿ ನಿಲಯಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಜಯಂತಿಯ ಅಂಗವಾಗಿ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆಯನ್ನು ಸಹ ಮಾಡಲಾಯಿತು.
ಈ ಸಂದರ್ಭದಲ್ಲಿ ಭೂಮಾಪನ ಇಲಾಖೆಯ ಸಹಾಯಕ ನಿರ್ದೇಶಕರಾದ ಶಿವಶಂಕರ್ , ಮಹಿಳಾ ಮತ್ತು ಶಿಶು ಅಭಿವೃದ್ಧಿ ಅಧಿಕಾರಿಗಳಾದ ಅಣ್ಣಯ್ಯ, ಅರಸು ಸಮಾಜದ ಮುಖಂಡರಾದ ಶಿವಶಂಕರ್ ಅರಸು, ಶ್ರೀಕಾಂತ ರಾಜ ಅರಸು ,ಸವಿತಾ ಸಮಾಜದ ಕಾಂತರಾಜು ,ಹಾಗೂ ತಾಲೂಕಿನ ಎಲ್ಲಾ ಅಧಿಕಾರಿ ವರ್ಗ ತಾಲೂಕು ಕಚೇರಿಯ ಸಿಬ್ಬಂದಿಗಳು ಹಲವು ಸಂಘ ಸಂಸ್ಥೆಗಳ ಮುಖಂಡರುಗಳು ಸೇರಿದಂತೆ ಹಲವರು ಉಪಸ್ಥಿತರಿದ್ದರು.
ವರದಿ: ಸುರೇಶ್ ಬಾಬು ಎಂ. ತುರುವೇಕೆರೆ