ರಾಜ್ಯ ರಾಜಕಾರಣದಲ್ಲಿ ಮತ್ತೆ ಪಕ್ಷಾಂತರ ಪರ್ವ ಆರಂಭವಾಗುತ್ತಿದೆಯೇ ಅನ್ನುವ ಅನುಮಾನ ಆರಂಭಗೊಂಡಿದ್ದು, ಕಳೆದ ಚುನಾವಣೆಯಲ್ಲಿ ಆಪರೇಷನ್ ಕಮಲ ನಡೆದಿದ್ದರೆ, ಈ ಬಾರಿ ಆಪರೇಷನ್ ಹಸ್ತ ಸದ್ದು ಮಾಡ್ತಿದೆ.
ಇದೀಗ ಸಚಿವ ಸತೀಶ್ ಜಾರಕಿಹೊಳಿ ಸ್ಫೋಟಕ ಹೇಳಿಕೆ ನೀಡಿದ್ದು, ಒಟ್ಟು 20 ಶಾಸಕರು ಸಂಪರ್ಕದಲ್ಲಿದ್ದಾರೆ. ಬಿಜೆಪಿಯವರಿಂದ ನಮಗೆ ಭಯ ಇದೆ 24 ಗಂಟೆಯೂ ನಾವು ಎಚ್ಚರದಿಂದ ಇರಬೇಕು ಎಂದು ಅವರು ಹೇಳಿದ್ರು.
ಪಕ್ಷದ ತತ್ವ ಸಿದ್ದಾಂತಕ್ಕೆ ಒಪ್ಪಿ ಬರುವವರು ಖಂಡಿತ ಬರಬಹುದು. ಸಹೋದರ ರಮೇಶ್ ಜಾರಕಿಹೊಳಿಯನ್ನ ಮತ್ತೆ ಪಾಪಸ್ಸು ಕಾಂಗ್ರೆಸ್ಗೆ ಕರೆತರುವ ವಿಚಾರವಾಗಿ ಮಾತನಾಡಿದ ಅವರು ನನಗೆ ಆ ಕುರಿತು ತಿಳಿದಿಲ್ಲ ಪಕ್ಷದ ಹಿರಿಯರು ಏನು ಹೇಳುತ್ತಾರೆ ಅದಕ್ಕೆ ನಾವು ಬದ್ಧ ಎಂದರು.


