ನಟಿ ರಾಖಿ ಸಾವಂತ್ ಹಾಗೂ ಮೈಸೂರು ಮೂಲದ ಆದಿಲ್ ಖಾನ್ ದುರಾನಿ ವಿವಾಹವಾದ ಬಳಿಕ ಒಂದಲ್ಲ ಒಂದು ಕಾರಣಕ್ಕೆ ಇವರಿಬ್ಬರ ಯುದ್ಧ ಮುಂದುವರಿದಿದೆ. ಮದುವೆಯಾದ ಬಳಿಕ ಇಬ್ಬರು ಹೆಚ್ಚು ಕಾಲ ಜೊತೆಯಾಗಿರಲಿಲ್ಲ.
ಈ ನಡುವೆ ಇವರಿಬ್ಬರ ನಡುವೆ ನಡೆದ ಕಿರಿಕ್ ನಿಂದಾಗಿ ಆದಿಲ್ ಖಾನ್ ಜೈಲಿಗೂ ಹೋಗಬೇಕಾಯ್ತು. ಇದೀಗ ಇವರಿಬ್ಬರ ಜಗಳ ಇನ್ನಷ್ಟು ತಾರಕಕ್ಕೇರಿದ್ದು, ಆದಿಲ್ ಖಾನ್ ವಿರುದ್ಧ ರಾಖಿ ಗಂಭೀರ ಆರೋಪ ಮಾಡಿದ್ದಾರೆ. ಆದಿಲ್ ಖಾನ್ ಗಂಡಸರ ಜೊತೆಗೂ ಲೈಂಗಿಕ ಕ್ರಿಯೆ ನಡೆಸುತ್ತಿದ್ದ ಎಂದು ರಾಖಿ ಆರೋಪಿಸಿದ್ದಾರೆ.
ಆದಿಲ್ ಖಾನ್ ಜೈಲಿನಿಂದ ಹೊರ ಬರುತ್ತಿದ್ದಂತೆಯೇ ರಾಖಿ ತನ್ನ ಯುದ್ಧ ಮುಂದುವರಿಸಿದ್ದಾರೆ.
ಆದಿಲ್ ಖಾನ್ ಈವರೆಗೆ ಜೈಲಿನಲ್ಲಿದ್ದದ್ದು ನನ್ನ ಕಾರಣದಿಂದಾಗಿ ಅಲ್ಲ, ಆತನ ಇರಾನಿಯನ್ ಗರ್ಲ್ ಫ್ರೆಂಡ್ ಅತ್ಯಾಚಾರದ ಕೇಸ್ ಹಾಕಿದ್ದಳು, ಆತ ನನಗೆ ಹೊಡೆದಿದ್ದ, ಟಾರ್ಚರ್ ನೀಡಿದ್ದ ಆ ಕಾರಣದಿಂದಲೂ ಅವನು ಜೈಲಿಗೆ ಹೋಗಿದ್ದ. ಜೈಲಿನಲ್ಲಿದ್ದದ್ದು ಕೇವಲ 22 ದಿನ ಮಾತ್ರ ಎಂದು ರಾಖಿ ಆರೋಪಿಸಿದ್ದಾರೆ.
ಮನೆಯಲ್ಲಿ ಆತ ಬೇರೆ ಹುಡುಗಿಯರು ಮತ್ತು ಗಂಡಸರ ಜೊತೆಗೆ ಲೈಂಗಿ ಕ್ರಿಯೆಯಲ್ಲಿ ತೊಡಗಿಕೊಂಡಿದ್ದದ್ದನ್ನು ನಾನು ನೋಡಿದ್ದೇನೆ. ಆತ ದುಬೈನಲ್ಲೂ ನನಗೆ ಹೊಡೆಯಲು ಪ್ರಯತ್ನಿಸಿದ್ದ ಎಂದು ಸಾಲು ಸಾಲು ಆರೋಪಗಳನ್ನ ಮಾಡಿದ್ದಾರೆ.


