ಬೆಂಗಳೂರು: ಮದುವೆಗೆ ಸೀರೆ ಖರೀದಿಸುವ ಸೋಗಿನಲ್ಲಿ ಬಂದು ಲಕ್ಷಾಂತರ ರೂಪಾಯಿ ಬೆಲೆಯ ಸೀರೆಗಳನ್ನು ಕದ್ದು ಪರಾರಿಯಾಗುತ್ತಿದ್ದ ಆಂಧ್ರಪ್ರದೇಶ ಮೂವರು ಮಹಿಳೆಯರೂ ಸೇರಿದಂತೆ ಆರು ಮಂದಿಯನ್ನು ಹೈಗೌಂಡ್ ಪೊಲೀಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಸಾಧುಪಾಟಿ ರಾಣಿ (33), ಈಟಾ ಸುನಿತಾ (45), ಗುಂಜಿ ಶಿವರಾಮ್ ಪ್ರಸಾದ್ (34), ಕನುಮುರಿ ವೆಂಕಟೇಶ್ವರ ರಾವ್(42), ತಣ್ಣೀರು ಶಿವಕುಮಾರ್(33), ತೊತ್ತಕ್ಕೆ ಭರತ್(30) ಬಂಧಿತರು, ಬಂಧಿತರಿಂದ ನಾಲ್ಕು ಲಕ್ಷ ಮೌಲ್ಯದ 22 ಸೀರೆ ಜಪ್ತಿ ಮಾಡಿಕೊಳ್ಳಲಾಗಿದೆ.


