ಕೊರಟಗೆರೆ: ಭಕ್ತರನ್ನು ಸದಾ ತನ್ನ ಸನ್ನಿಧಿಗೆ ಪ್ರೀತಿಪಾತ್ರವಾಗಿವೇ ಕರೆಸಿಕೊಂಡು ಶ್ರದ್ಧೆ ಭಕ್ತಿಗೆ ಒಲಿಯುವ ತಾಯಿಗೆ ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಗೊರವನಹಳ್ಳಿ ಶ್ರಿ ಮಹಾಲಕ್ಷ್ಮಿಯ ದರ್ಶನ ಪಡೆಯಲು ಜನಸಾಗರವೇ ಹರಿದು ಬಂದಿತು.
ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಗೊರವನಹಳ್ಳಿ ಗ್ರಾಮದಲ್ಲಿ ನೆಲೆಸಿರುವ ವರಗಳನ್ನು ನೀಡುವ ಶ್ರೀ ಮಹಾಲಕ್ಷ್ಮಿಗೆ ಮುಂಜಾನೆಯೇ ಮಹಿಳೆಯರು ತಮ್ಮ ಮನೆಗಳಲ್ಲಿ ವರಮಹಾಲಕ್ಷ್ಮೀಯನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿ ಆರ್ಶೀವಾದ ಪಡೆದ ನಂತರ, ಈ ಪುಣ್ಯ ಕ್ಷೇತ್ರಕ್ಕೆ ಬಂದು ತಾಯಿಯ ದರ್ಶನ ಪಡೆದು ಪುನೀತರಾಗುತ್ತಾರೆ.
ಶ್ರಾವಣ ಮಾಸದ ಎರಡನೇ ಶುಕ್ರವಾರ ಪೌರ್ಣಿಮೆಗೆ ಮೊದಲು ಬರುವ ಹಬ್ಬವಾದ ವರ ಮಹಾಲಕ್ಷ್ಮೀ ಹಬ್ಬ ಸಕಲ ಸಂಪತ್ತುಗಳಿಗೆ ಮೂಲವಾಗಿಯೂ ಪುತ್ರ ಪೌತ್ರ ಸುಖದಾಯಕವಾಗಿ ಇರುವ ಪವನಕರ ಹಬ್ಬ.
ಪ್ರತಿ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ರಾಜ್ಯದ ನಾನಾ ಭಾಗದಿಂದ ಭಕ್ತರು ಆಗಮಿಸುವ ಪವಿತ್ರ ಕ್ಷೇತ್ರದಲ್ಲಿ ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಲಕ್ಷಾಂತರ ಜನ ಬಂದಿರುವ ನಿರೀಕ್ಷೆ ಇದ್ದು, ಉದ್ಘಾಟನೆಗೆ ಸಿದ್ಧವಾಗಿರುವ ನೂತನ ದಾಸೋಹ ಕೇಂದ್ರದಲ್ಲಿ ಸುಸಜ್ಜಿತವಾಗಿ ಪ್ರಸಾದವನ್ನು ವ್ಯವಸ್ಥೆ ಮಾಡಲಾಗಿತ್ತು, ಪ್ರತಿ ವರ್ಷದಂತೆ ಈ ವರ್ಷವೂ ಸಹ ಫ್ರೇಂಡ್ಸ್ ಗ್ರೂಪ್ ಗೆಳೆಯರ ಬಳಗ ದಾಸೋಹದ ವಿನಿಯೋಗ ನಿರ್ವಹಿಸಿತು.
ಕೆನರಾ ಬ್ಯಾಂಕ್ ತುಮಕೂರುಜಿಲ್ಲೆ ಹಾಗೂ ತಾಲ್ಲೂಕು ಖಾಖೆಗಳಿಂದ ವರಮಹಾಲಕ್ಷ್ಮೀ ಹಬ್ಬದ ಶುಭಾಶಯ ತಿಳಿಸು ಮೂಲಕ ಗೊರವನಹಳ್ಳಿ ದರ್ಶನಕ್ಕೆ ಬಂದಿದ್ದ ಭಕ್ತರಿಗೆ ಲಾಡು ಪ್ರಸಾದದ ಬಾಕ್ಸನ್ನು ವಿತರಿಸಿದರು.
ರಾಜ್ಯ ಸೇರಿದಂತೆ ಹೊರ ರಾಜ್ಯದಿಂದಲ್ಲೂ ಭಕ್ತಾಧಿಗಳು ಈ ಕ್ಷೇತ್ರಕ್ಕೆ ಆಗಮಿಸಿ ದೇವಿಯ ಕೃಪೆಗೆ ಪಾತ್ರ ರಾಗಿ ಆಶೀರ್ವಾದ ಪಡೆದುಕೊಳ್ಳುತ್ತಾರೆ, ಹಾಗೆಯೆ ತೀತಾ ಜಲಾಶಯನ ಪ್ರವಾಸಿಗರಿಗೆ ಕೈ ಬೀಸಿ ಕರೆಯುತ್ತದೆ, ಬಂದಂತಹ ಭಕ್ತರು ಒಂದು ಬಾರಿ ಈ ತೀತಾ ಡ್ಯಾಂ ನೋಡಿ ಕಣ್ಮನ ತುಂಬಿಕೊಳ್ಳುತ್ತಾರೆ.
ಹೆಣ್ಣು ಮಕ್ಕಳಿಗೂ ಸೌಭಾಗ್ಯ ನೀಡುವ ಪುಣ್ಯಕರ ವ್ರತವಾಗಿ ಆಚರಿಸುವ ವರ ಮಹಾಲಕ್ಷ್ಮೀ ಹಬ್ಬದಂದು ರಾಜ್ಯ ಸೇರಿದಂತೆ ಹೊರ ರಾಜ್ಯಗಳಲ್ಲೂ ಪ್ರಸಿದ್ಧಿಯಾಗಿರುವ ಗೊರವನಹಳ್ಳಿ ಶ್ರೀ ಮಹಾಲಕ್ಷ್ಮೀ ದೇವಾಲಯದಲ್ಲಿ ವರ್ಷದ ಪ್ರತಿ ಶುಕ್ರವಾರ ಮತ್ತು ಮಂಗಳವಾರ ಸೇರಿದಂತೆ ಭಾನುವಾರ ವರಮಹಾಲಕ್ಷ್ಮೀ ಹಬ್ಬದಂದು ದೇವಿಗೆ ವಿವಿಧ ನಾನಾ ಅಲಂಕಾರದೊಂದಿಗೆ ವಿಶೇಷ ಪೂಜೆ, ವ್ರತ, ಹೋಮಗಳನ್ನು ಏರ್ಪಡಿಸಲಾಗುತ್ತದೆ.
ನಾವು ಪ್ರತಿ ವರ್ಷ ಈ ಗೊರವನಹಳ್ಳಿ ಶ್ರೀ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಬಂದು ಪೊಜೆ ಸಲ್ಲಿಸಿ ಭಕ್ತಿ ಪೂರಕವಾಗಿ ನಮಿಸುತ್ತೇವೆ ಈ ತಾಯಿ ಮಹಿಮೆಯಿಂದ ಎಲ್ಲಾವೂ ಒಳಿತಾಗಿವೆ ಎಂದು ಭಕ್ತೆಯೊಬ್ಬರು ಮಾತನಾಡಿದರು.
ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್ ಮಾತನಾಡಿ, ಗೊರವನಹಳ್ಳಿ ಪುಣ್ಯಕ್ಷೇತ್ರಕ್ಕೆ ಹೆಚ್ಚಿನ ಮಹಿಳಾ ಭಕ್ತಾಧಿಗಳು ಆಗಮಿಸುತ್ತಿರುವುದು ರಾಜ್ಯ ಸರ್ಕಾರದ ಶಕ್ತಿ ಯೋಜನೆ ಸದುಪಯೋಗವನ್ನು ಪಡೆದು ಶ್ರೀ ಕ್ಷೇತ್ರಕ್ಕೆ ಬಂದು ಆ ಮಹಾಲಕ್ಷ್ಮಿ ದೇವಿಯ ದರ್ಶನ ಪಡೆಯುತ್ತಿದ್ದಾರೆ. ಹಬ್ಬದ ಪ್ರಯುಕ್ತ ಹೆಚ್ಚಿನ ಭಕ್ತಾಧಿಗಳು ಬರುತ್ತಿದ್ದಾರೆ. ಮಹಿಳೆಯರ ಹಾಗು ಸಾರ್ವಜನಿಕರ ಭದ್ರತೆಗೆ ಹೆಚ್ಚಿನ ಕೆಲಸವನ್ನು ತಾಲ್ಲೂಕು ಆಡಳಿತ ನಿರ್ವಸುತ್ತಿದ್ದು, ದೇವಾಲಯದ ಟ್ರಸ್ಟ್ ಸಹ ಅತ್ಯಂತ ಅನುಕೂಲವನ್ನು ನೀಡುತ್ತಿದೆ. ಮತ್ತೋಮ್ಮೆ ಎಲ್ಲಾರಿಗೂ ವರಮಹಾಲಕ್ಷ್ಮೀ ಹಬ್ಬದ ಶುಭಾಶಯಗಳು ಎಂದು ತಿಳಿಸಿದರು.
ಜಿ.ಪಂ ಸಿಇಓ ಪ್ರಭು ಜಿ ಮಾತನಾಡಿ, ನಾಡಿನ ಸಮಸ್ತ ಜನತೆಗೆ ವರಮಹಾಲಕ್ಷ್ಮೀ ಹಬ್ಬದ ಶುಭಾಶಯ ತಿಳಿಸುತ್ತಾ ತುಮಕೂರು ಜಿಲ್ಲೆಯ ಸುಪ್ರಸಿದ್ಧ ಶ್ರೀ ಗೊರವನಹಳ್ಳಿ ಮಹಾಲಕ್ಷ್ಮೀ ದೇವಿ ಸನ್ನಿಧಿಯಲ್ಲಿ ಹಬ್ಬವನ್ನು ಆಚರಿಸಲು ಭಕ್ತಾಧಿಗಳೊಂದಿಗೆ ಜಿಲ್ಲಾಡಳಿತ, ತಾಲ್ಲೂಕು ಆಡಳಿತ ದೇವಿಯ ದರ್ಶನ ಪಡೆದುಕೊಂಡಿದ್ದೇವೆ.ಜಿಲ್ಲಾ ಹಾಗೂ ತಾಲ್ಲೂಕು ಆಡಳಿತ, ದೇವಾಲಯದ ಟ್ರಸ್ಟ್ ಅತ್ಯಂತ ವ್ಯವಸ್ಥಿತವಾಗಿ ಎಲ್ಲಾ ಭಕ್ತರಿಗೆ, ಪ್ರಯಾಣಿಕರಿಗೆ ಅನುಕೂಲವನ್ನು ಕಲ್ಪಿಸಿದ್ದಾರೆ, ಭಕ್ತರು ದರ್ಶನ ಪಡೆದು ಆ ತಾಯಿಯ ಕೃಪೆಗೆ ಪಾತ್ರರಾಗಿ ಎಂದರು…
ಜಿಲ್ಲಾಧಿಕಾರಿಗಳಾದ ಕೆ.ಶ್ರೀನಿವಾಸ್, ಪೋಲೀಸ್ ವರಿಷ್ಟಾಧಿಕಾರಿಗಳಾದ ರಾಹುಲ್ ಶಹಪೂರ್ ವಾಡ, ಜಿ.ಪಂ ಸಿಇಓ ಪ್ರಭು .ಜಿ, ತಹಸೀಲ್ದಾರ್ ಮುನಿಶಾಮಿರೆಡ್ಡಿ, ಪಿಎಸ್ ಐ ಚೇತನ್ ಕುಮಾರ್, ಟ್ರಸ್ಟ್ ನ ನಿರ್ವಹಣಾಧಿಕಾರಿ ಕೇಶವಮೂರ್ತಿ, ಅಧ್ಯಕ್ಷ ವಾಸುದೇವ, ಕಾರ್ಯದರ್ಶಿ ಮುರುಳಿಕೃಷ್ಣ, ಖಜಾಂಚಿ ಜಗದೀಶ್, ಧರ್ಮದರ್ಶಿಗಳು, ಪ್ರಧಾನ ಅರ್ಚಕ ಸುಬ್ರಹ್ಮಣ್ಯ ಸೇರಿದಂತೆ ಸಾವಿರಾರು ಭಕ್ತಾಧಿಗಳು ದೇವಿದರ್ಶನ ಪಡೆದರು.
ವರದಿ: ಮಂಜುಸ್ವಾಮಿ ಎಂ.ಎನ್.ಕೊರಟಗೆರೆ


