ತುಮಕೂರು: ಮೂರು ದಿನದ ಹಿಂದೆ ನಾಪತ್ತೆಯಾಗಿದ್ದ ವಿದ್ಯಾರ್ಥಿ ಶವವಾಗಿ ಪತ್ತೆಯಾಗಿರೋ ಘಟನೆ ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಹುಳಿಯಾರಿನಲ್ಲಿ ನಡೆದಿದೆ.
ಹೇಮಂತ್ ಕುಮಾರ್ (16) ಮೃತ ದುರ್ದೈವಿಯಾಗಿದ್ದಾರೆ. ಹುಳಿಯಾರು ಕರೆ ಅಂಗಳದಲ್ಲಿ ಶವ ಪತ್ತೆಯಾಗಿದ್ದು ಮೃತ ದುರ್ದೈವಿ ಹಂದನಕೆರೆ ಹೋಬಳಿಯ ಗೋಪಾಲಪುರದ ನಿವಾಸಿಯಾಗಿದ್ದಾನೆ.
ಎಸ್.ಎಸ್.ಎಲ್.ಸಿ ಓದುತ್ತಿದ್ದ ಹೇಮಂತ್ ಕುಮಾರ್ , ಕ್ರೀಡಾಕೂಟದಲ್ಲಿ ಭಾಗವಹಿಸಲು ಮೂರು ದಿನದ ಹಿಂದೆ ತನ್ನ ಪೋಷಕರಿಗೆ ಹೇಳಿ ಮನೆಯಿಂದ ಹೋಗಿದ್ದನು. ವಾಪಸ್ ಮನೆಗೆ ಬರದ ಕಾರಣ ಪೋಷಕರು ಎಷ್ಟು ಹುಡಕಾಟ ನಡೆಸಿದರೂ ಪತ್ತೆಯಾಗಲಿಲ್ಲ. ಇಂದು ಹೇಮಂತ್ ಕುಮಾರ್ ಶವ ಕೆರೆಯ ಬಳಿ ಪತ್ತೆಯಾಗಿದೆ.
ಈ ಸಂಬಂಧ ಹುಳಿಯಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹುಳಿಯಾರು ಪೊಲೀಸರು ತನಿಖೆ. ಮುಂದುವರಿಸಿದ್ದಾರೆ.


