ಬೆಂಗಳೂರು: ಪ್ರೀತಿಸಿದ ಯುವಕನಿಂದಲೇ ಯುವತಿ ಹತ್ಯೆಯಾದ ಘಟನೆ ಶನಿವಾರ ಸಂಜೆ ಬೇಗೂರು ಠಾಣಾ ವ್ಯಾಪ್ತಿಯ ನ್ಯೂ ಮೈಕೋ ಲೇಔಟ್ ನಲ್ಲಿ ನಡೆದಿದೆ. ಕುಕ್ಕರ್ ನಿಂದ ತಲೆಗೆ ಹೊಡೆದು ಕೇರಳ ಮೂಲದ ದೇವಾ (24) ಎಂಬಾಕೆಯನ್ನ ಆಕೆಯ ಪ್ರಿಯಕರ ವೈಷ್ಣವ್ (24) ಹತ್ಯೆಗೈದಿದ್ದಾನೆ ಎಂದು ತಿಳಿದುಬಂದಿದೆ.
ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡು ಬೇಗೂರು ಠಾಣಾ ಪೊಲೀಸರು ಆರೋಪಿಯನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಆಗ್ನೆಯ ವಿಭಾಗದ ಡಿಸಿಪಿ ಸಿ ಕೆ ಬಾಬಾ ತಿಳಿಸಿದ್ದಾರೆ.
ವರದಿ: ಆಂಟೋನಿ ಬೇಗೂರು


