ಬೆಂಗಳೂರು: ಪೇಂಟ್ ಕೆಲಸಕ್ಕೆ ಬಂದು ಚಿನ್ನಾಭರಣ ಕಳ್ಳತನ ಮಾಡಿದ್ದ ಆರೋಪಿಯನ್ನುಬಸವನಗುಡಿಯ ಪೊಲೀಸರು ಬಂಧಿಸಿದ್ದಾರೆ. ಉತ್ತರ ಪ್ರದೇಶ ಮೂಲಕ ಉಮೇಶ್ ಪ್ರಸಾದ್ ಬಂಧಿತರು.
ಪೇಂಟ್ ಮಾಡಲು ಮನೆಗೆ ಬಂದಿದ್ದ ವೇಳೆ ಮನೆ ಮಾಲೀಕರ ಕಣ್ಣು ತಪ್ಪಿಸಿ ಕಬೋರ್ಡ್ ನಲ್ಲಿ ಇಟ್ಟಿದ್ದ ಚಿನ್ನಾಭರಣ ಕಳ್ಳತನ ಮಾಡಿದ್ದ ಉಮೇಶ್ ಜಾಧವ್. ಆನಂತರ ದೂರಿನ ಆಧಾರದ ಮೇಲೆ ಉಮೇಶ್ ಕದ್ದಿರುವುದು ಬೆಳಕಿಗೆ ಬಂದಿದ್ದು, ಬಂಧಿತನಿಂದ 6 ಲಕ್ಷ ಮೌಲ್ಯದ 100 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ.


