ಬೆಂಗಳೂರು ಶಿವಾಜಿನಗರದ ಮನೆಯೊಂದರಿಂದ ಕಾಣೆಯಾಗಿದ್ದ ಹಕ್ಕಿ ತಳಿಯ ಕುರುಡು ಶ್ವಾನವನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ಕಾವಲ್ ಬೈರಸಂದ್ರ ಮನೆಯೊಂದರಲ್ಲಿ ಶ್ವಾನ ಇರುವುದನ್ನು ಪತ್ತೆಹಚ್ಚಿದ ಪೊಲೀಸರು, ಶ್ವಾನವನ್ನು ರಕ್ಷಿಸಿ ಮಾಲೀಕರಿಗೆ ಒಪ್ಪಿಸಿದ್ದಾರೆ.
ಶಿವಾಜಿನಗರದ ರಮ್ಯಾ ಎಂಬವರ ಮನೆಯಲ್ಲಿ ಸಾಕಿದ್ದ ಹಕ್ಕಿ ತಳಿಯ ಶ್ವಾನ ಆ. 22 ರಂದು ಕಾಣೆಯಾಗಿತ್ತು. ಈ ಸಂಬಂಧ ಕಮರ್ಷಿಯಲ್ ಠಾಣೆಗೆ ರಮ್ಯಾ ದೂರು ನೀಡಿದ್ದರು.


