ಅನ್ಯ ಧರ್ಮದ ಹುಡುಗನ ಜೊತೆಗೆ ಹೋಗುತ್ತಿದ್ದ ಮುಸ್ಲಿಂ ಯುವತಿಗೆ ಕೆಟ್ಟದಾಗಿ ನಿಂದಿಸಿದ್ದ ಮುಸ್ಲಿಂ ಯುವಕನನ್ನು ಬೆಂಗಳೂರು ಪೂರ್ವ ವಿಭಾಗದ ಸೆನ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕೋಲಾರದ ಬಂಗಾರಪೇಟೆ ಮೂಲದ ಜಾಕೀರ್ ಅಹಮ್ಮದ್ ಬಂಧಿತ ಆರೋಪಿ.
ಅನ್ಯಧರ್ಮದ ಯುವಕನ ಬೈಕ್ ನಲ್ಲಿ ಕಂಪನಿಯೊಂದಕ್ಕೆ ಸಂದರ್ಶನ ನೀಡಲು ಹೋಗುತ್ತಿದ್ದ ವೇಳೆ ಆರೋಪಿ ಜಾಕೀರ್ ಮುಸ್ಲಿಂ ಯುವತಿಯನ್ನು ತಡೆದು ಬುರ್ಖಾ ತೆಗೆಯುವಂತೆ ಒತ್ತಾಯಿಸಿದ್ದ. ಬಳಿಕ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದಕ್ಕೆ ಆರೋಪಿಯನ್ನು ಬಂಧಿಸಿದ್ದಾರೆ.


