ದೆಹಲಿ ಮದ್ಯ ನೀತಿ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ ಅಧಿಕಾರಿಯೊಬ್ಬರ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿದೆ. ಇಡಿ ಸಹಾಯಕ ನಿರ್ದೇಶಕ ಪವನ್ ಖತ್ರಿ ಮತ್ತು ಕ್ಲಾರಿಡ್ಜ್ ಹೋಟೆಲ್ ಮುಖ್ಯಸ್ಥ ದೀಪಕ್ ಸಾಂಗ್ವಾನ್ ವಿರುದ್ಧ ಪ್ರಕರಣ ದಾಖಲಾಗಿದೆ.
ಈ ಹಿಂದೆ ಪವನ್ ಖತ್ರಿ ಅವರು ಅಮನದೀಪ್ ಅವರಿಂದ 5 ಕೋಟಿ ರೂಪಾಯಿ ಪಡೆದಿದ್ದಾರೆ ಎಂದು ಇಡಿ ಪತ್ತೆ ಹಚ್ಚಿತ್ತು. ಇಡಿ ಕಚೇರಿಯ ಗುಮಾಸ್ತ ಕೂಡ ಆತನೊಂದಿಗೆ ಹಣ ತೆಗೆದುಕೊಂಡು ಹೋಗಿರುವುದು ಪತ್ತೆಯಾಗಿದೆ.
ಇದು ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮತ್ತು ಅಮನದೀಪ್ ಸಿಂಗ್ ದಾಲ್ ಅವರಿಗೆ ಸಂಬಂಧಿಸಿದ ಪ್ರಕರಣವಾಗಿದೆ. ಅಮನದೀಪ್ ಅವರ ತಂದೆ ಬಿರೇಂದರ್ ಪಾಲ್ ಸಿಂಗ್ ಅವರು ಚಾರ್ಟರ್ಡ್ ಅಕೌಂಟೆಂಟ್ ಪ್ರವೀಣ್ ವಾಟ್ಸ್ ಗೆ 5 ಕೋಟಿ ರೂಪಾಯಿ ಪಾವತಿಸಿದ್ದಾರೆ ಮತ್ತು ಈ ಹಣವನ್ನು ಪವನ್ ಖಾತ್ರಿಗೆ ಹಸ್ತಾಂತರಿಸಲಾಗಿದೆ ಎಂದು ಇಡಿ ಪತ್ತೆ ಮಾಡಿದೆ. ಇಡಿ ಪ್ರಕರಣದ ಬಳಿಕ ಇದೀಗ ಸಿಬಿಐ ಪ್ರಕರಣ ದಾಖಲಿಸಿಕೊಂಡಿದೆ.


