ಬೆಂಗಳೂರು: ಕಾಂಗ್ರೆಸ್ ಸರ್ಕಾರದ ‘100 ದಿನದ ಸಾಧನೆ. ಅಂದ್ರೆ, ಅದು ವರ್ಗಾವಣೆ ಮಾತ್ರ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ‘ಅಭಿವೃದ್ಧಿ ಕೆಲಸ ಎಲ್ಲಾ ಸ್ಥಗಿತ ಆಗಿದೆ. ನಮ್ಮ ಕಾಲದ ಕೆಲಸಗಳನ್ನೆಲ್ಲ ನಿಲ್ಲಿಸಿದ್ದಾರೆ’ ಎಂದು ಅವರು ಆರೋಪಿಸಿದರು.
ಕಾಂಗ್ರೆಸ್ ಸರ್ಕಾರ ಅಧಿಕಾರ ಬರುವ ಪೂರ್ವದಲ್ಲಿ ನೀಡಿದ ಗ್ಯಾರೆಂಟಿಗಳಲ್ಲಿ ಎಲ್ಲರಿಗೂ ಉಚಿತ ಮತ್ತು ಖಚಿತ ಅಂದರು. ಆದರೆ, ಈಗ ನೂರಾರು ಷರತ್ತುಗಳನ್ನು ಹಾಕಿದ್ದಾರೆ. ಇವರ ಯಾವುದೇ ಯೋಜನೆ ಕೂಡ ಪೂರ್ಣ ಪ್ರಮಾಣದಲ್ಲಿ ಈ ಜನರಿಗೆ ಸಿಗಲ್ಲ ಎಂದು ಹೇಳಿದರು.
ಪ್ರತಿಪಕ್ಷದ ನಾಯಕನ ಆಯ್ಕೆಗೂ ಚಾರ್ಜ್ ಶೀಟ್ ಗೂ ಸಂಬಂಧ ಇಲ್ಲ. ನೂರು ದಿನದ ವೈಫಲ್ಯ ಏನು ಅಂತ ಚಾರ್ಜ್ ಶೀಟ್ ಬಿಡುಗಡೆ ಮಾಡಲಾಗಿದೆ. ಅದಕ್ಕೆ ಅವರು ಮೊದಲು ಉತ್ತರ ಕೊಡಬೇಕು ಎಂದು ಅವರು ಹೇಳಿದರು.


